Latestಕೇರಳದೇಶ-ವಿದೇಶವೈರಲ್ ನ್ಯೂಸ್

ಶಬರಿಮಲೆಗೆ ಭೇಟಿ ನೀಡುತ್ತಿರುವ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು..! ಪಂಪಾದಿಂದ ಇರುಮುಡಿ ಹೊತ್ತು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವ ಸಾಧ್ಯತೆ

966

ನ್ಯೂಸ್ ನಾಟೌಟ್: ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಹೋಗುತ್ತಿರುವುದು ಇದೇ ಮೊದಲು. ಪಂಪಾದಿಂದ ಇರುಮುಡಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವ ಸಾಧ್ಯತೆಯಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಶಬರಿಮಲೆ ಏರುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಭದ್ರತಾ ಇಲಾಖೆಯು ಅವರು ನೇರವಾಗಿ ಇಳಿಯಲು ಸನ್ನಿಧಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಯೋಜಿಸಿತ್ತು ಆದರೆ ವಿರೋಧದಿಂದಾಗಿ ಆ ಆಲೋಚನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. 66 ವರ್ಷಕ್ಕಿಂತ ಮೇಲ್ಪಟ್ಟ ರಾಷ್ಟ್ರಪತಿ ದ್ರೌಪದಿ ಮುರ್ಮು, ಕುಮಾರಕೋಮ್ ನಿಂದ ಟೇಕ್ ಆಫ್ ಆದ ನಂತರ ನಿಲಕ್ಕಲ್ ನಲ್ಲಿ ಹೆಲಿಕಾಪ್ಟರ್ ನಲ್ಲಿ ಇಳಿಯಲಿದ್ದಾರೆ. ಅವರು ಕಾರಿನಲ್ಲಿ ಪಂಪಾ ತಲುಪಿ ಇರುಮುಡಿ ಹೊತ್ತು ತೆರೆಳಲಿದ್ದಾರೆ. ಅವರು ದೇವಸ್ವಂ ಅತಿಥಿ ಗೃಹ ಅಥವಾ ಸನ್ನಿಧಾನಂನಲ್ಲಿರುವ ಶಬರಿ ಅತಿಥಿ ಗೃಹದಲ್ಲಿ ತಂಗಲಿದ್ದಾರೆ. ದರ್ಶನದ ಸಮಯವನ್ನು ನಿರ್ದಿಷ್ಟವಾಗಿ ನಿಗದಿ ಪಡಿಸಲಾಗಿಲ್ಲ.

ರಾಷ್ಟ್ರಪತಿಗಳ ಕಚೇರಿಯಿಂದ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಸೂಚನೆ ಬಂದಿದ್ದು, ದ್ರೌಪದಿ ಮುರ್ಮು 18 ಮತ್ತು 19 ರಂದು ಶಬರಿಮಲೆಯಲ್ಲಿ ಇರುತ್ತಾರೆ. ಈ ತಿಂಗಳ 14 ರಂದು ‘ಎಡವ ಮಾಸ’ದ ಪೂಜೆಗಾಗಿ ದೇವಾಲಯದ ಬಾಗಿಲು ತೆರೆಯಲಿದೆ.

19 ರಂದು ರಾತ್ರಿ 10 ಗಂಟೆಗೆ ಮುಚ್ಚಲಿದೆ. ಇತರ ಯಾತ್ರಿಕರಿಗೆ ಆಗುವ ಅನನುಕೂಲತೆಯನ್ನು ಕಡಿಮೆ ಮಾಡಲು ಕೊನೆಯ ಎರಡು ದಿನಗಳನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರಪತಿ ಕಾರ್ಯಕ್ರಮವು ಮೇ 18 ರಂದು ಪಾಲಾದಲ್ಲಿ ನಡೆಯುವ ಸೇಂಟ್ ಥಾಮಸ್ ಕಾಲೇಜು ಜಯಂತಿ ಆಚರಣೆಯಲ್ಲಿ ಭಾಗವಹಿಸುವುದರೊಂದಿಗೆ ಪ್ರಾರಂಭವಾಗಲಿದೆ. ಮೇ 19 ರಂದು ಅವರು ಪಂಪಾಗೆ ಭೇಟಿ ನೀಡಿ ಶಬರಿಮಲೆಗೆ ಹೋಗಲಿದ್ದಾರೆ.

ಖ್ಯಾತ ನಟ ದಳಪತಿ ವಿಜಯ್ ಭೇಟಿಗೆ ಬಂದ ಅಭಿಮಾನಿಯ ಮುಖಕ್ಕೆ ಗನ್​ ಹಿಡಿದ ಬಾಡಿಗಾರ್ಡ್..! ವಿಡಿಯೋ ವೈರಲ್ ​

ಕೊಹ್ಲಿ ಪೋಸ್ಟರ್ ​ಗೆ ಮೇಕೆ ಕಡಿದು ರಕ್ತಾಭಿಷೇಕ..! ಅಂಧಾಭಿಮಾನಿಗಳ ವಿರುದ್ಧ ದೂರು ದಾಖಲು

See also  ಎರಡು ಕೈಗಳಿಲ್ಲದಿದ್ದರೂ 'ಡೆಲಿವರಿ ಬಾಯ್'ಯಾಗಿ ದುಡಿಯುತ್ತಿರುವ ವ್ಯಕ್ತಿ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget