ನ್ಯೂಸ್ ನಾಟೌಟ್ :ಕೇರಳದ ತಿರುವನಂತಪುರಂನಲ್ಲಿ ಇಂದು(ಫೆ.28) ಕೇರಳದ ಕೊಟ್ಟಾಯಂ ಸಮೀಪದ ರೈಲ್ವೆ ಹಳಿಯ ಮೇಲೆ ಮೂವರು ಮಹಿಳೆಯರ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಟ್ಟಾಯಂ-ನೀಲಾಂಬೂರ್ ಮಾರ್ಗದ ರೈಲು ಎರ್ನಾಕುಲಂ ಕಡೆ ಪ್ರಯಾಣಿಸುವಾಗ ಮೂವರು ಮಹಿಳೆಯರು ಅದಕ್ಕೆ ಅಡ್ಡಲಾಗಿ ಹಾರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತರ ವಯಸ್ಸು, ಗುರುತು ಮತ್ತಿತರ ವಿವರಗಳು ಇನ್ನೂ ಖಚಿತವಾಗಿಲ್ಲ. ಈ ಘಟನೆಯಿಂದ ರೈಲು ಸಂಚಾರ ವ್ಯತ್ಯಯಗೊಂಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.