Uncategorized

ಕೇರಳ ಪೊಲೀಸ್ ಕಮಾಂಡೊ ಗುಂಡು ಹಾರಿಸಿಕೊಂಡು ಆತ್ಮಹತ್ಯೆ..! ಉನ್ನತ ಪೊಲೀಸ್ ಅಧಿಕಾರಿಗಳ ಕಿರುಕುಳ ಆರೋಪ..!

ನ್ಯೂಸ್ ನಾಟೌಟ್ : ಕೇರಳ ಪೊಲೀಸ್ ಕಮಾಂಡೊ ಒಬ್ಬರು ತಮ್ಮ ಸರ್ವೀಸ್ ಪಿಸ್ತೂಲಿನಿಂದಲೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಕೇರಳದಲ್ಲಿ ಭಯೋತ್ಪಾದಕ ಮತ್ತು ಮಾವೋವಾದಿ ನಿಗ್ರಹ ಕಾರ್ಯಾಚರಣೆ ನಡೆಸುವ ಎಸ್ ಒಜಿಯಲ್ಲಿ ಕಮಾಂಡೊ ಆಗಿದ್ದ 36 ವರ್ಷದ ವಿನೀತ್ ಎಂದು ಗುರುತಿಸಲಾಗಿದೆ. ಮಲಪ್ಪುರಂನ ಅರೀಕೋಡ್ ಬಳಿಯಿರುವ ಮಲಬಾರ್ ವಿಶೇಷ ಪೊಲೀಸ್ ಶಿಬಿರಕ್ಕೆ ಸಂಬಂಧಿಸಿದ ವಯನಾಡ್ ಜಿಲ್ಲೆಯ ವೆಂಗಪಲ್ಲಿ ಗ್ರಾಮದ ನಿವಾಸಿಯಾದ ವಿನೀತ್, ರವಿವಾರ ರಾತ್ರಿ ಪೊಲೀಸ್ ಶಿಬಿರದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಕೇರಳ ಗೃಹ ಇಲಾಖೆಯ ಪ್ರಕಾರ, 2016ರಿಂದ 2024ರ ಈ ತಿಂಗಳವರೆಗೆ ರಾಜ್ಯದ ಒಟ್ಟು 138 ಪೊಲೀಸ್ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಪತ್ನಿ ಗರ್ಭಿಣಿಯಾಗಿರುವುದರಿಂದ ನನಗೆ ರಜೆ ಬೇಕು ಎಂದು ವಿನೀತ್ ಮನವಿ ಮಾಡಿದ್ದು, ಆತನ ಮನವಿಯನ್ನು ಉನ್ನತ ಅಧಿಕಾರಿಗಳು ನಿರಾಕರಿಸಿದ್ದರು ಎನ್ನಲಾಗಿದೆ. ಇನ್ನೂ ಹಲವು ಕಾರಣಗಳಿರುವ ಬಗ್ಗೆ ಅನುಮಾನ ಮೂಡಿದೆ.

Click

https://newsnotout.com/2024/12/kananda-news-chattisghar-c-abhikakapura-anada-yadav/
https://newsnotout.com/2024/12/tirupathi-darshana-pass-kannada-news-viral-news-d-karnataka/
https://newsnotout.com/2024/12/man-found-dead-in-nettana-from-rail-kannada-news/
https://newsnotout.com/2024/12/kalmakaru-sullia-kannada-news-ayyappa-maladhari-elephant-d/

Related posts

‘ಹುಡುಗಿ ಸಿಗಲಿಲ್ಲ’ವೆಂದು ಆದಿಚುಂಚನಗಿರಿ ಮಠಕ್ಕೆ ಯುವಕರ ಪಾದಯಾತ್ರೆ..!,30 ವರ್ಷ ಮೇಲ್ಪಟ್ಟ ಯುವಕರ ಒತ್ತಾಯವೇನು?

10 ಕೋಟಿ ರೂ.ಲಾಟರಿ ಗೆದ್ದ ಆಟೋ ಚಾಲಕ!!,ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ರೋಚಕ ಕಥೆ!!

ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಅರೆಸ್ಟ್‌