Latestಕೇರಳಕ್ರೈಂವೈರಲ್ ನ್ಯೂಸ್

ಕೇರಳ: ಪೊಲೀಸರ ತಪಾಸಣೆಯ ವೇಳೆ ಮಾದಕ ದ್ರವ್ಯಗಳ ಪ್ಯಾಕೇಟ್ ಗಳನ್ನು ನುಂಗಿದ್ದಆರೋಪಿ..! 28 ವರ್ಷದ ವ್ಯಕ್ತಿ ಸಾವು..!

909

ನ್ಯೂಸ್ ನಾಟೌಟ್ : ಪೊಲೀಸರ ತಪಾಸಣೆಯ ವೇಳೆ ಸಿಕ್ಕಿ ಹಾಕಿಕೊಂಡ ಮಾದಕ ದ್ರವ್ಯ ಮಾರಾಟಗಾರನೊಬ್ಬ ಎರಡು ಎಂಡಿಎಂಎ ಪ್ಯಾಕೆಟ್ ಗಳನ್ನು ಸೇವಿಸಿ ಮೃತಪಟ್ಟ ನಂತರ, ಕೃತಕ ಮಾದಕ ದ್ರವ್ಯಗಳ ವಿರುದ್ಧದ ಕಾರ್ಯಾಚರಣೆಯನ್ನು ಕೇರಳ ಪೊಲೀಸರು ಹಾಗೂ ಅಬಕಾರಿ ಇಲಾಖೆ ತೀವ್ರಗೊಳಿಸಿದ ಹಿನ್ನೆಲೆ ಈ ಘಟನೆ ನಡೆದಿದೆ.

ಮಾದಕ ದ್ರವ್ಯಗಳ ಮಾರಾಟದ ಆರೋಪಿಯನ್ನು ಕೋಯಿಕ್ಕೋಡ್ ನ ತಾಮರಸ್ಸೇರಿಯ ನಿವಾಸಿಯಾದ ಎಯ್ಯಾದನ್ ಶಾನಿದ್ (28) ಎಂದು ಪೊಲೀಸರು ಗುರುತಿಸಿದ್ದಾರೆ. ಶುಕ್ರವಾರ(ಮಾ.7) ಬೆಳಗ್ಗೆ ಮಾದಕ ದ್ರವ್ಯಗಳ ತಪಾಸಣೆ ಅಭಿಯಾನದ ಭಾಗವಾಗಿ ಪೊಲೀಸರು ವಾಹನಗಳ ಪರಿಶೀಲನೆ ನಡೆಸುವಾಗ, ಶಾನಿದ್ ತನ್ನ ಬಳಿಯಿದ್ದ ಎರಡು ಎಂಡಿಎಂಎ ಪಾಕೆಟ್ ಗಳನ್ನು ನುಂಗಿದ್ದಾನೆ.

ಆ ಪಾಕೆಟ್ ಗಳಲ್ಲಿ ಎಂಡಿಎಂಎ ಇತ್ತು ಎಂಬುದು ತಿಳಿಯುತ್ತಿದ್ದಂತೆಯೇ, ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದ ಪೊಲೀಸರು, ಅಲ್ಲಿಂದ ಕೋಯಿಕ್ಕೋಡ್ ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದರು. ಎಂಡೋಸ್ಕೋಪಿಯ ಸಂದರ್ಭದಲ್ಲಿ ಆತನ ಹೊಟ್ಟೆಯಲ್ಲಿ ಗಮನಾರ್ಹ ಪ್ರಮಾಣದ ಎಂಡಿಎಂಎ ಕಣಗಳನ್ನು ಹೊಂದಿರುವ ಪಾಕೆಟ್ ಗಳಿರುವುದು ಕಂಡು ಬಂದಿತ್ತು. ಆದರೆ, ಶುಕ್ರವಾರ ರಾತ್ರಿ ಆತನ ಪರಿಸ್ಥಿತಿ ವಿಷಮಿಸಿದ್ದು, ಶನಿವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಶಾನಿದ್ ಈ ಹಿಂದೆ ಮಾದಕ ದ್ರವ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

See also  ಕರ್ನಾಟಕ-ಆಂಧ್ರ ಬಸ್‌ ಗಳ ಓವರ್‌ ಟೆಕ್ ಭರದಲ್ಲಿ 8 ವರ್ಷದ ಬಾಲಕಿ ಸಾವು..! ಆಕೆಯ ಸೋದರ ಮಾವನೂ ದುರಂತ ಅಂತ್ಯ..!
  Ad Widget   Ad Widget   Ad Widget   Ad Widget