ಕಾಸರಗೋಡು

ಕೇರಳ: ಪ್ರಧಾನಿ ಮೋದಿ ಭೇಟಿಯ ವಿರುದ್ಧ ಬೆದರಿಕೆ ಪತ್ರ! ಆ ಪತ್ರದಲ್ಲೇನಿತ್ತು?

315

 ನ್ಯೂಸ್ ನಾಟೌಟ್:  ಪ್ರಧಾನಿ ನರೇಂದ್ರ ಮೋದಿ ಎ 24 ರಂದು ಕೊಚ್ಚಿಗೆ ಬೇಟಿ ನೀಡಲಿದ್ದಾರೆ, ಭೇಟಿಗೂ ಮುನ್ನ ಕೇರಳ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಎ 24 ರಂದು ಕೊಚ್ಚಿಗೆ ಪ್ರಧಾನಿ ಮೋದಿಯವರ ಯೋಜಿತ ಭೇಟಿಯ ಸಂದರ್ಭದಲ್ಲಿ ಆತ್ಮಾಹುತಿ ದಾಳಿಯ ಬೆದರಿಕೆಯನ್ನು ಪತ್ರದಲ್ಲಿ ಹಾಕಲಾಗಿದೆ. ಬೆದರಿಕೆ ಪತ್ರ ಕಳುಹಿಸಿದ ವ್ಯಕ್ತಿಯ ಹೆಸರು ಮತ್ತು ಇತರ ಮಾಹಿತಿಯನ್ನು ಪತ್ರ ಒಳಗೊಂಡಿರುವುದು ಪೊಲೀಸರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿ ತತ್ ಕ್ಷಣ ತನಿಖೆ ಆರಂಭಿಸಿದ್ದಾರೆ.

ಬೆದರಿಕೆ ಪತ್ರದಲ್ಲಿ ಹೆಸರಿರುವ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದು, ಆದರೆ ಅವರು ಪತ್ರ ಬರೆದಿರುವುದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ, ಅವರ ವಿರೋಧಿಗಳು ತನ್ನ ಹೆಸರನ್ನು ಹಾಳು ಮಾಡುವ ದುರುದ್ದೇಶದಿಂದ ಪತ್ರ ಬರೆದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದರ ಹೊರತಾಗಿಯೂ, ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿವೆ ಎಂದು ವರದಿ ತಿಳಿಸಿದೆ.

See also  ತಡರಾತ್ರಿ ಮನೆ ಮೇಲೆ ಮಗುಚಿ ಬಿದ್ದ ಚಲಿಸುತ್ತಿದ್ದ ಪೆಟ್ರೋಲ್ ತುಂಬಿದ ಲಾರಿ..! ಹಲವರ ಬಲಿ ಪಡೆದ ಬಸ್ ದುರಂತ ನಡೆದ ಜಾಗದಲ್ಲಿ ಮತ್ತೊಂದು ಅವಘಡ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget