ಕ್ರೈಂದೇಶ-ಪ್ರಪಂಚ

ಕೇರಳ: ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ! ವಿದ್ಯಾರ್ಥಿನಿ ಬಾಯ್ಬಿಟ್ಟಳು ಕರಾಳ ಸತ್ಯ!

ನ್ಯೂಸ್ ನಾಟೌಟ್: ಶನಿವಾರ ಫೆ.18ರ ರಾತ್ರಿ ಕೇರಳದ ಕೋಝಿಕ್ಕೋಡ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಇಬ್ಬರು ಸ್ನೇಹಿತರು ಬಲವಂತವಾಗಿ ಮದ್ಯ ಕುಡಿಸಿದ ನಂತರ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಹಾಯ ಮಾಡಿದ್ದ ಸಹಚರರ ದೂರಿನ ಪ್ರಕಾರ, ಆಕೆಗೆ ಬಲವಂತವಾಗಿ ಮದ್ಯ ಕುಡಿಸಲಾಗಿತ್ತು ಮತ್ತು ಸ್ವಲ್ಪ ಅಮಲೇರಿದ ಮೇಲೆ ಇಬ್ಬರೂ ಸ್ನೇಹಿತರು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ವರದಿಯಾಗಿದೆ.

ಕಾಲೇಜು ಅಧಿಕಾರಿಗಳು ವಿದ್ಯಾರ್ಥಿನಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿರುವುದನ್ನು ಗಮನಿಸಿ ನಂತರ ಕೌನ್ಸೆಲಿಂಗ್ ಸೆಷನ್ ನಡೆಸಿ ವಿದ್ಯಾರ್ಥಿನಿಯನ್ನು ಮಾತನಾಡಿಸಿದಾಗ ವಿಷಯ ಬಯಲಾಗಿದೆ. ಇದರಲ್ಲಿ ವಿದ್ಯಾರ್ಥಿಯು ಘಟನೆಯನ್ನು ಬಹಿರಂಗಪಡಿಸಿದಳು. ಈ ಹಿನ್ನೆಲೆಯಲ್ಲಿ ಕೋಝಿಕ್ಕೋಡ್‌ನ ಕಸಬಾ ಪೊಲೀಸರಿಗೆ ಈ ಕುರಿತು ದೂರು ನೀಡಲಾಗಿತ್ತು.

ಕೇರಳದ ಎರ್ನಾಕುಲಂ ಮೂಲದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಇಬ್ಬರು ಆರೋಪಿಗಳು ತಮ್ಮ ಬಾಡಿಗೆ ಮನೆಗೆ ಆಹ್ವಾನಿಸಿದ್ದರು. ಸಣ್ಣ ಪಾರ್ಟಿ ಸಂಭ್ರಮಿಸಲು ತಯಾರಾಗಿತ್ತು ನಂತರ ನರ್ಸಿಂಗ್ ವಿದ್ಯಾರ್ಥಿನಿಯನ್ನು ಬಲವಂತವಾಗಿ ಮದ್ಯ ಕುಡಿಸಿ ಆಕೆಗೆ ಅಮಲೇರಿದ ಸ್ಥಿತಿಯಲ್ಲಿರುವುದನ್ನು ಖಾತ್ರಿಪಡಿಸಿಕೊಂಡ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ನಂತರ ನರ್ಸಿಂಗ್ ವಿದ್ಯಾರ್ಥಿನಿಯನ್ನು ರೂಮ್ ನಲ್ಲೇ ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಜ್ಞೆ ಮರಳಿದ ನಂತರ, ವಿದ್ಯಾರ್ಥಿನಿ ತನ್ನ ಸ್ನೇಹಿತೆಗೆ ತಿಳಿಸಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.

Related posts

ಪಟ್ಟಣಗೆರೆ ಶೆಡ್ ಮಾಲೀಕರಿಗೆ ನೋಟಿಸ್ ನೀಡಿದ ಬಿಬಿಎಂಪಿ..! ದರ್ಶನ್ ಕೇಸ್ ಬಳಿಕ ಶೆಡ್ ಮಾಲೀಕನಿಗೆ ಮತ್ತೊಂದು ಶಾಕ್..!

ಬಸ್ ನಂತೆ ಈ ಇಲೆಕ್ಟ್ರಿಕ್ ಬೈಕ್‌, ಅಚ್ಚರಿಯಿಂದ ಆನಂದ್ ಮಹೀಂದ್ರ ಹೇಳಿದ್ದೇನು ಗೊತ್ತಾ?

ಮನೆಕೆಲಸದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ರಾ ಡಿಎಸ್ಪಿ..? 15 ವರ್ಷದ ಬಾಲಕಿ ಹೇಳಿದ್ದೇನು..?