ಕ್ರೈಂವೈರಲ್ ನ್ಯೂಸ್

ಕೇರಳದ ಬಾಲಕಿಯಿಂದ ಆತಂಕಕಾರಿ ಆರೋಪ..! 4 ವರ್ಷದಲ್ಲಿ 64 ಮಂದಿಯಿಂದ ಲೈಂಗಿಕ ಕಿರುಕುಳ..!

ನ್ಯೂಸ್ ನಾಟೌಟ್: ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಹದಿಹರೆಯದ ಯುವತಿಯೊಬ್ಬರು ಕಳೆದ ನಾಲ್ಕು ವರ್ಷಗಳಲ್ಲಿ 64 ಮಂದಿಯಿಂದ ಲೈಂಗಿಕ ಕಿರುಕುಳ ಎದುರಿಸಿದ್ದಾಗಿ ಹೇಳಿದ್ದಾಳೆ. ಈ ಸಂಬಂಧ ಐದು ಮಂದಿಯನ್ನು ಬಂಧಿಸಲಾಗಿದ್ದು, ಆರನೇ ವ್ಯಕ್ತಿ ಈಗಾಗಲೇ ಜೈಲಿನಲ್ಲಿದ್ದಾನೆ. ಎರಡು ತಿಂಗಳ ಹಿಂದೆ ಈ ಯುವತಿಗೆ 18 ವರ್ಷ ತುಂಬಿತ್ತು ಎನ್ನಲಾಗಿದೆ.

ಪಟ್ಟಣಂತಿದ್ದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎನ್.ರಾಜೀವ್ ಪ್ರಕಾರ, ಯುವತಿ ಮೊದಲ ಬಾರಿಗೆ ಲೈಂಗಿಕ ಕಿರುಕುಳದ ಬಗ್ಗೆ ಶಾಲಾ ಕೌನ್ಸಿಲಿಂಗ್ ಸೆಷನ್ ವೇಳೆ ಬಹಿರಂಗಪಡಿಸಿದಳು. ಮಕ್ಕಳ ಕಲ್ಯಾಣ ಸಮಿತಿ ಮಧ್ಯಪ್ರವೇಶಿಸಿ ಈ ಸಂಬಂಧ ಪೊಲೀಸ್ ಪ್ರಕರಣ ದಾಖಲಿಸಿತ್ತು. ಕ್ರೀಡಾಪಟುವೊಬ್ಬ ಕ್ರೀಡಾ ಶಿಬಿರಗಳು ಸೇರಿದಂತೆ ಪಟ್ಟಣಂತಿಟ್ಟ ಜಿಲ್ಲೆಯ ವಿವಿಧೆಡೆಗಳಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ಕೋಚ್ಗಳು, ಸಹಪಾಠಿಗಳು ಹಾಗೂ ಸ್ಥಳೀಯರು ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ.

ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದೆ. ಈ ಯುವತಿಗೆ ಮೊಬೈಲ್ ಫೋನ್ ಇಲ್ಲದ ಕಾರಣ ತಂದೆಯ ಮೊಬೈಲ್ ಬಳಸುತ್ತಿದ್ದಳು. ಈ ಫೋನ್ ನಲ್ಲಿ ಯುವತಿ ತನಗೆ ಲೈಂಗಿಕ ಕಿರುಕುಳ ನೀಡಿದ ಸುಮಾರು 40 ಮಂದಿಯ ಹೆಸರು ಹಾಗೂ ದೂರವಾಣಿ ಸಂಖ್ಯೆ ದಾಖಲಿಸಿದ್ದಾಳೆ.

ಯುವತಿಯ ಕರುಣಾಜನಕ ಕಥೆ ಕೇಳಿ ಆಘಾತಗೊಂಡ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಈ ಆರೋಪಗಳು ನಿಜವೇ ಎಂದು ದೃಢಪಡಿಸಿಕೊಳ್ಳುವ ಸಲುವಾಗಿ ಮನಃಶಾಸ್ತ್ರಜ್ಞರಿಂದ ಕೌನ್ಸಿಲಿಂಗ್ ಮಾಡಿಸಿದ್ದಾರೆ. ಇದು ಅಪರೂಪದ ಪ್ರಕರಣ ಎಂಬ ಕಾರಣದಿಂದ ಎಸ್ಪಿಯವರಿಗೆ ಮಾಹಿತಿ ನೀಡಿ ತನಿಖೆಯ ಮೇಲೆ ನಿಗಾ ಇಡುವಂತೆ ಮನವಿ ಮಾಡಿಕೊಂಡಿದ್ದಾಗಿ ಸಮಿತಿ ಅಧ್ಯಕ್ಷರು ಹೇಳಿದ್ದಾರೆ.

Related posts

ಸುಳ್ಯ: ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳ ಮನೆಗೆ ಭೇಟಿ ನೀಡಿದ NIA..! ಆರೋಪಿಗಳು ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆ!

ಕೆಲಸದ ಕೊಡಿಸುವುದಾಗಿ ನಂಬಿಸಿ ಒಂಬತ್ತು ಮಂದಿಯಿಂದ ಅತ್ಯಾಚಾರ! ಕ್ಯಾಬ್ ಚಾಲಕ ವಶಕ್ಕೆ!

ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತಕ್ಕೆ 2ನೇ ಸ್ಥಾನ..! ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸಚಿವ ಮೋದಿಗೆ ಹೇಳಿದ್ದೇನು?