ಕರಾವಳಿಕಾಸರಗೋಡುಕ್ರೈಂ

ಕೇರಳ ಪ್ರಾರ್ಥನಾ ಮಂದಿರದ ಸ್ಪೋಟ ಹಿನ್ನೆಲೆ ಕೊಡಗು, ಮಂಗಳೂರಿಗೂ ಬಾಂಬ್ ಬೆದರಿಕೆ ಇದೆಯಾ? ಕರ್ನಾಟಕ ಗಡಿಭಾಗದಲ್ಲಿ ಅಲರ್ಟ್‌ಗೆ ಗೃಹಸಚಿವ ಖಡಕ್ ಸೂಚನೆ ನೀಡಿದ್ದೇಕೆ?

246

ನ್ಯೂಸ್ ನಾಟೌಟ್: ಕೇರಳ ಕನ್ವೆನ್ಷನ್ ಸೆಂಟರ್ ನಲ್ಲಿ ಸ್ಪೋಟ ಹಿನ್ನೆಲೆಯಲ್ಲಿ ಕರ್ನಾಟಕ ಗಡಿಭಾಗದಲ್ಲಿ ಅಲರ್ಟ್ ಇರಲು ಸೂಚನೆ ನೀಡಲಾಗಿದೆ‌. ಈ ಬಗ್ಗೆ ಗಡಿಭಾಗದಲ್ಲಿ ಅಲರ್ಟ್ ಇರುವಂತೆ ಡಿಜಿ, ಐಜಿಯವರು ಸೂಚನೆ ನೀಡಲಾಗಿದೆ. ಅಲ್ಲದೆ ಕೇರಳ ಗಡಿ ಭಾಗದಲ್ಲಿ ಭದ್ರತೆ, ನಿಗಾ ಹೆಚ್ಚಿಸಲಾಗುವುದು ಎಂದು ಮಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ದಸರಾ ಸಂದರ್ಭದಲ್ಲಿ ಮೈಸೂರು, ಕೊಡಗು ಮಂಗಳೂರಿನಲ್ಲಿ ಬೆದರಿಕೆ ಹಿನ್ನೆಲೆಯಲ್ಲಿ ಈ ಮೂರೂ ಕಡೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.‌ ಅದಕ್ಕೆ ಏನು ಕ್ರಮ ಕೈಗೊಳ್ಳಬೇಕಿತ್ತೋ ಅದನ್ನು ತೆಗೆದುಕೊಂಡಿದ್ದೇವೆ ಎಂದರು.

ಸೈಬರ್ ಕ್ರೈಮ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸುತ್ತಿದ್ದೇವೆ. ಅದನ್ನು ನ್ಯಾಷನಲ್, ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ನಲ್ಲಿ ಕೊಂಡೊಯ್ಯಲು ಕ್ರಮ ವಹಿಸುತ್ತಿದ್ದೇವೆ.

ಪಿಎಸ್ಐ ಹಗರಣ ಬಳಿಕ ಪೊಲೀಸ್ ನೇಮಕಾತಿ ಆಗುತ್ತಿಲ್ಲ‌ ಎಂಬ ಪ್ರಶ್ನೆಗೆ ಸರ್ಕಾರದ ಅಭಿಪ್ರಾಯ ಕೋರ್ಟಿಗೆ ತಿಳಿಸಿದ್ದೇವೆ. ಪರೀಕ್ಷೆ ಇನ್ನಿತರ ಪ್ರಕ್ರಿಯೆಗಳನ್ನು ನಡೆಸಬೇಕೆಂಬ ಬಗ್ಗೆ ಹೇಳಿದ್ದೇವೆ ಎಂದರು.

ಕೇರಳ ರಾಜ್ಯದ ಕೊಚ್ಚಿಯಿಂದ 10 ಕಿ. ಮೀ. ದೂರದಲ್ಲಿ ಇರುವ ಕಲಮಸ್ಸೆರಿ ಎಂಬಲ್ಲಿ ಇರುವ ಜೆಹೋವಾಸ್ ವಿಟ್ನೆಸ್ ಕನ್ವೆನ್ಶನ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಇದು ಕ್ರೈಸ್ತರ ಒಂದು ಪಂಗಡದ ಪ್ರಾರ್ಥನಾ ಮಂದಿರವಾಗಿದೆ. ಇಲ್ಲಿ ಭಾನುವಾರದ ಪ್ರಾರ್ಥನೆ ನಡೆಯುತ್ತಿತ್ತು. ಪ್ರಾರ್ಥನೆಯ ಮಧ್ಯದಲ್ಲೇ ಸ್ಫೋಟ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸುಮಾರು 2 ಸಾವಿರ ಮಂದಿ ಈ ಪ್ರಾರ್ಥನಾ ಮಂದಿರಕ್ಕೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಸ್ಪೋಟದ ಹಿಂದೆ ಉಗ್ರರ ನಂಟಿರುವ ಶಂಕೆ ಇದ್ದು, ನಾಳೆ ಈ ಕುರಿತು ಕೆರಳ ಸಿಎಂ ಪಿಣರಾಯಿ ವಿಜಯನ್ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

See also  ಕುಕ್ಕರ್, ಸೀರೆ ಕಂಡರೆ ಬೆಂಕಿ ಹಚ್ಚಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಹೇಳಿದ ಹೆಚ್.ಡಿ.ಕೆ..! ಗ್ರಾಮಗಳಿಗೆ ಪ್ಯಾರಾ ಮಿಲಿಟರಿ ಪೋರ್ಸ್ ತರಲು ಹೇಳುತ್ತೇನೆ ಎಂದ ಮಾಜಿ ಮುಖ್ಯಮಂತ್ರಿ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget