Latest

ಪಕ್ಕದ ಮನೆ ಕೋಳಿ ವಿರುದ್ಧ ದೂರು ದಾಖಲಿಸಿದ ವೃದ್ಧ!! ಕಾರಣ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ!ತನಿಖೆ ಆರಂಭಿಸಿದ ಪೊಲೀಸರು ಹೇಳಿದ್ದೇನು?

1.2k

ನ್ಯೂಸ್‌ ನಾಟೌಟ್:ಇಲ್ಲೊಂದೆಡೆ ಕೋಳಿಗಾಗಿ ಜಗಳ ನಡಿತಿದೆ. ಹೌದು,ಕೇರಳದ ಪಥನಾಂತಿಟ್ಟ ಪ್ರದೇಶದ ಪಲ್ಲಿಕಲ್ ಎಂಬ ಶಾಂತ ಗ್ರಾಮದಲ್ಲಿ ಸಂಘರ್ಷ ನಡೆಯುತ್ತಿದೆ. ಅಷ್ಟಕ್ಕೂ ಈ ಜಗಳ ನಡಿತಿರೋದು ಬೇರ್ಯಾವ ಕಾರಣಕ್ಕೂ ಅಲ್ಲ.ಪಕ್ಕದ ಮನೆಯ ಕೋಳಿಗಾಗಿ. ಇದು ದಿನವೂ ಮುಂಜಾನೆ ಕೂಗಿ ತಮ್ಮ ನಿದ್ರೆಗೆ ಭಂಗ ತರುತ್ತಿದೆ ಎಂದು ಆರೋಪಿಸಲಾಗಿದೆ. ವ್ಯಕ್ತಿಯೊಬ್ಬರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,ಇದಾದ ನಂತರ ಆ ಊರಿನಲ್ಲಿ ಗಲಾಟೆ ಭುಗಿಲೆದ್ದಿದೆ. ರಾಧಾಕೃಷ್ಣ ಕುರುಪ್ ಎಂಬ ವೃದ್ಧನಿಗೆ ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳಗಿನ ಜಾವದಲ್ಲಿ ಇನ್ನೇನು ನಿದ್ರೆ ಹತ್ತುತ್ತಿದೆ ಎನ್ನುವಾಗ ದಿನವೂ ಬೆಳಗಿನ ಜಾವವೇ ಕೂಗಿ ತನ್ನ ನಿದ್ರೆಗೆ ಭಂಗ ತರುತ್ತಿರುವ ಕೋಳಿಯ ಬಗ್ಗೆ ದೂರು ದಾಖಲಿಸಿದ್ದಾರೆ!

ದೂರಿನಲ್ಲೇನಿದೆ?

ಪ್ರತಿದಿನ ಬೆಳಿಗ್ಗೆ 3 ಗಂಟೆಗೆ ಕುರುಪ್ ಅವರ ನೆರೆಯವರ ಕೋಳಿ ನಿರಂತರವಾಗಿ ಕೂಗಲು ಪ್ರಾರಂಭಿಸುತ್ತದೆ. ಅದು ಅವರ ನಿದ್ರೆಗೆ ತೊಂದರೆ ಮಾಡುತ್ತಿದೆ ಮತ್ತು ಶಾಂತಿಯುತ ಜೀವನವನ್ನು ಅಡ್ಡಿಪಡಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರಾಧಾಕೃಷ್ಣ ಕುರುಪ್ ಅವರಿಗೆ ಸಾಕಾಗಿ ಹೋಗಿತ್ತು. ತನ್ನ ನೆರೆಮನೆಯ ಅನಿಲ್ ಕುಮಾರ್ ಎಂಬುವವರ ಕೋಳಿ ತನ್ನ ನಿದ್ರೆಗೆ ಭಂಗ ತರುತ್ತಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಅಧಿಕಾರಿಗಳು ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತನಿಖೆ ಆರಂಭಿಸಿದರು. ಕೋಳಿಯೇ ಎರಡೂ ಮನೆಯ ಸಮಸ್ಯೆಗೆ ಕಾರಣ ಎಂದು ನಿರ್ಧರಿಸಿದರು. ಇಬ್ಬರನ್ನೂ ಕರೆಸಿ ಈ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಬಳಿಕ ಅಧಿಕಾರಿಗಳು ಆ ಸ್ಥಳವನ್ನು ಪರಿಶೀಲಿಸಿದರು.ನೆರೆಹೊರೆಯವರು ತಮ್ಮ ಕೋಳಿಗಳನ್ನು ತಮ್ಮ ಮನೆಯ ಮೇಲಿನ ಮಹಡಿಯಲ್ಲಿ ಇಟ್ಟುಕೊಂಡಿರುವುದು ಕಂಡುಬಂದಿದೆ. ರಾಧಾಕೃಷ್ಣ ಕುರುಪ್ ಅವರಿಗೆ ಕೋಳಿಯ ಕೂಗುವಿಕೆಯಿಂದ ನಿಜಕ್ಕೂ ತೊಂದರೆಯಾಗುತ್ತಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ. ವಿವಾದವನ್ನು ಬಗೆಹರಿಸಲು ಕೋಳಿ ಶೆಡ್ ಅನ್ನು ಮೇಲಿನ ಮಹಡಿಯಿಂದ ಮನೆಯ ಅಂಗಳದ ಪಕ್ಕಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳು ರಾಧಾಕೃಷ್ಣ ಅವರ ನೆರೆಹೊರೆಯವರಿಗೆ ಸೂಚಿಸಿದ್ದಾರೆ.

See also  ಮಹಿಳೆ 18 ಮಕ್ಕಳಿಗೆ ಜನ್ಮ ನೀಡುತ್ತಾಳೆಂದು ಭಾವಿಸಿದ್ದರು, ಬಳಿಕ ಏನಾಯ್ತು?ಏನದು ಭಯಾನಕ ಸತ್ಯ!!
  Ad Widget   Ad Widget   Ad Widget   Ad Widget   Ad Widget   Ad Widget   Ad Widget