ನ್ಯೂಸ್ ನಾಟೌಟ್: ಕೇರಳದ ಮಲಪ್ಪುರಂನ ಅರೀಕೋಡ್ ಬಳಿಯ ಫುಟ್ಬಾಲ್ ಮೈದಾನದಲ್ಲಿ ಪಂದ್ಯದ ವೇಳೆ ಸಿಡಿಸಿದ ಪಟಾಕಿಯ ಕಿಡಿ ತಗುಲಿದ ಪರಿಣಾಮ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಫುಟ್ಬಾಲ್ ಮೈದಾನದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಪಟಾಕಿ ಸಿಡಿಸಲಾಗಿದೆ. ಪಟಾಕಿಯ ಕಿಡಿ ಇಡೀ ಮೈದಾನಕ್ಕೆ ವ್ಯಾಪಿಸಿ ಪಂದ್ಯ ವೀಕ್ಷಿಸಲು ಕುಳಿತಿದ್ದ ಜನರ ಮೇಲೆ ಬಿದ್ದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಒಂದೇ ಆಟೋದಲ್ಲಿ ಬರೋಬ್ಬರಿ 19 ಜನ ಪ್ರಯಾಣ..!ಚೆಕ್ ಪಾಯಿಂಟ್ ಬಳಿ ತಡೆದ ಪೊಲೀಸರು..! ವಿಡಿಯೋ ವೈರಲ್
ಗಾಯಾಳುಗಳನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎನ್ನಲಾಗಿದೆ.