Uncategorized

ಕೇರಳ: ತಂದೆ, ಇಬ್ಬರು ಮಕ್ಕಳ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ, ಏನಿದು ಘಟನೆ?

ನ್ಯೂಸ್ ನಾಟೌಟ್‌: ಕೇರಳದ ಪಟ್ಟತ್ತಣಂ ಪ್ರದೇಶದ ಮನೆಯೊಂದರಲ್ಲಿ ವ್ಯಕ್ತಿ(35 ವರ್ಷ) ಸೇರಿದಂತೆ ಮತ್ತಾತನ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬಗ್ಗೆ ವರದಿಯಾಗಿದೆ. ಮೃತರನ್ನು ಜೋಸ್‌ ಪ್ರಮೋದ್‌, ದೇವನಾರಾಯಣನ್‌ (9) ಮತ್ತು ದೇವಾನಂದ (7) ಎಂದು ಗುರುತಿಸಲಾಗಿದೆ.

ಪ್ರಮೋದ್‌ನ ಮಾವ ಬೆಳಗ್ಗೆ ಮನೆಗೆ ಬಂದಾಗ ಬಾಗಿಲಿನ ಒಳಗಿನಿಂದ ಲಾಕ್‌ ಮಾಡಿರುವುದು ಹಾಗೂ ಯಾರೂ ಸ್ಪಂದಿಸದೇ ಇರುವುದನ್ನು ಕಂಡು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು.ಈ ವೇಳೆ ಸ್ಥಳಕ್ಕ ಪೊಲೀಸರು ಆಗಮಿಸಿ ಬಾಗಿಲನ್ನು ಒಡೆದು ಒಳ ಹೋದಾಗ ಮಕ್ಕಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿದ್ದರೆ ಪ್ರಮೋದ್‌ ಮೃತದೇಹ ಇನ್ನೊಂದು ಕೋಣೆಯಲ್ಲಿ ಪತ್ತೆಯಾಗಿದೆ.

ಪ್ರಮೋದ್‌ ಪತ್ನಿ ವೈದ್ಯೆಯಾಗಿದ್ದು ಘಟನೆ ನಡೆದಾಗ ಕರ್ತವ್ಯದಲ್ಲಿದ್ದರೆಂದು ಪೊಲೀಸರು ತಿಳಿಸಿದ್ದಾರೆ.ಪ್ರಮೋದ್‌ ತನ್ನಿಬ್ಬರು ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಘಟನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಪೊಲೀಸ್‌ ತನಿಖೆ ಮುಂದುವರಿದಿದೆ.

Related posts

ವಿದ್ಯುತ್ ಕಂಬಕ್ಕೆ ಗುದ್ದಿದ ಶಾಲಾ ವಾಹನ..! ಬೈಕ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅನಾಹುತ..!

ಹಜಮಾಡಿ: ಸದ್ಯಕ್ಕಿಲ್ಲ ಹೆಚ್ಚುವರಿ ಶುಲ್ಕ ಸಂಗ್ರಹ

8 ಮಂದಿ ಯುವಕರ ಬಾಳಲ್ಲಿ ಯುವತಿಯ ಚೆಲ್ಲಾಟ..! ಎಂಟೂ ಮಂದಿಯನ್ನು ಮದುವೆಯಾಗಿ ಚಿನ್ನಾಭರಣ ದೋಚುತ್ತಿದ್ದ ಕಳ್ಳಿ..!