ಕಾಸರಗೋಡುಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಕೇರಳ ಸಿಎಂ ಪಿಣರಾಯಿ ವಿಜಯನ್‌ ಪ್ರಯಾಣಿಸುತ್ತಿದ್ದ ಕಾರು ಸರಣಿ ಅಪಘಾತ..! ಇಲ್ಲಿದೆ ವೈರಲ್ ವಿಡಿಯೋ

213

ನ್ಯೂಸ್ ನಾಟೌಟ್‌ :ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ತುತ್ತಾಗಿದೆ. ಅವರ ಬೆಂಗಾವಲು ಕಾರುಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿವೆ. ತಿರುವನಂತಪುರದಲ್ಲಿ ಅ.28 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಸಿಎಂ ಪಿಣರಾಯಿ ವಿಜಯನ್ ಎಂದಿನಂತೆ ತಮ್ಮ ಬೆಂಗಾವಲು ವಾಹನಗಳೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮುಖ್ಯರಸ್ತೆಯಲ್ಲೇ ಮುಂದಿದ್ದ ಕಾರು ತಕ್ಷಣ ಬ್ರೇಕ್‌ ಹಾಕಿದೆ. ವೇಗವಾಗಿಯೇ ಬೆಂಗಾವಲು ವಾಹನಗಳು ಚಲಿಸುತ್ತಿದ್ದರಿಂದ ನಿಯಂತ್ರಣ ತಪ್ಪಿ, ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ ಎನ್ನಲಾಗಿದೆ.

ಸಿಎಂ ಜೊತೆಗೆ ಚಲಿಸುತ್ತಿದ್ದ ಸುಮಾರು ಏಳು ಬೆಂಗಾವಲು ವಾಹನಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಕೂಡ ಆಗಿದೆ. ಮಹಿಳೆಯೊಬ್ಬರು ಈ ಬೆಂಗಾವಲು ವಾಹನಗಳು ಬಂದಾಗಲೇ ರಸ್ತೆಯಲ್ಲಿ ದಿಢೀರನೆ ಬಲಕ್ಕೆ ತಿರುಗಿಸಿದ್ದಾರೆ. ಹಾಗಾಗಿ ಮುಂದೆ ಹೋಗುತ್ತಿದ್ದ ಭದ್ರತಾ ವಾಹನಗಳು ಬ್ರೇಕ್‌ ಹೊಡೆದಿವೆ ಎನ್ನಲಾಗಿದೆ.

ಈ ವೇಳೆ ಹಿಂದೆಯೇ ವೇಗವಾಗಿ ಬರುತ್ತಿದ್ದ ಸಿಎಂ ವಾಹನ ಸೇರಿದಂತೆ ಕೊನೆಯ ಆಂಬುಲೆನ್ಸ್‌ ಕೂಡ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ಅದೃಷ್ಟವಶಾತ್‌ ಸಿಎಂ ಪಿಣರಾಯಿ ವಿಜಯನ್‌ ಕ್ಷೇಮವಾಗಿದ್ದಾರೆ ಎನ್ನಲಾಗಿದೆ.

See also  ಕರ್ನಾಟಕದಲ್ಲೂ ಎಲ್ಲ ಪತಂಜಲಿ ಉತ್ಪನ್ನಗಳ ಪರಿಶೀಲನೆಗೆ ಆದೇಶಿಸಿದ ಆರೋಗ್ಯ ಸಚಿವ, ದಿನೇಶ್ ಗುಂಡೂರಾವ್ ಈ ಬಗ್ಗೆ ಹೇಳಿದ್ದೇನು..?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget