ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಕೇರಳ ಮೂಲದ ವಿದ್ಯಾರ್ಥಿಯಿಂದ ಕರ್ನಾಟಕದಲ್ಲಿ ಮತಾಂತರಕ್ಕೆ ಯತ್ನ..? ಔಷಧಿ ಹಾಗೂ ಇಂಜೆಕ್ಷನ್‌ ನಿಂದ ನಿಮ್ಮ ರೋಗ ವಾಸಿಯಾಗುವುದಿಲ್ಲ ಕ್ರೈಸ್ತ ಧರ್ಮಕ್ಕೆ ಬನ್ನಿ ಎಂದ MBBS ವಿದ್ಯಾರ್ಥಿ..!

ನ್ಯೂಸ್ ನಾಟೌಟ್ : ESI ಆಸ್ಪತ್ರೆಯಲ್ಲಿ ಕೇರಳ ಮೂಲದ MBBS ವಿದ್ಯಾರ್ಥಿಯೊಬ್ಬ ಬೇರೆ ವಿದ್ಯಾರ್ಥಿಗಳನ್ನು ಮತಾಂತರಕ್ಕೆ ಯತ್ನಿಸಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಹಿನೋ ಡಾಲಿಚಾನ್ ಎನ್ನುವ ವಿದ್ಯಾರ್ಥಿ ರೋಗಿಗಳ ಆರೋಗ್ಯ ತಪಾಸಣೆ ನೆಪದಲ್ಲಿ ಕ್ರೈಸ್ತ ಧರ್ಮದ ಕರಪತ್ರಗಳನ್ನು ಹಂಚಿದ್ದಾನೆ ಎಂದು ಆರೋಪಿಗಲಾಗಿದೆ. ಅಲ್ಲದೇ ಔಷಧಿ ಹಾಗೂ ಇಂಜೆಕ್ಷನ್‌ನಿಂದ ನಿಮ್ಮ ರೋಗ ವಾಸಿಯಾಗುವುದಿಲ್ಲ. ಕ್ರೈಸ್ತ ಧರ್ಮಕ್ಕೆ ಬನ್ನಿ, ಯೆಸುವಿನ ದಾರಿಯಲ್ಲಿ ನಡೆದು ನಿಮ್ಮ ರೋಗಗಳನ್ನ ದೂರ ಮಾಡಿಕೊಳ್ಳಿ ಅಂತ ರೋಗಿಗಳಿಗೆ ಹೇಳುತ್ತಿದ್ದ ಅಂತ ಆರೋಪಿಸಲಾಗಿದೆ.

ವಿದ್ಯಾರ್ಥಿ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿಶ್ವವಿದ್ಯಾನಿಲಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಮತಾಂತರಕ್ಕೆ ಯತ್ನಿಸುತ್ತಿದ್ದ ವಿದ್ಯಾರ್ಥಿ ಹಿನೋ ಡಾಲಿಚಾನ್ ಮೂಲತಃ ಕೇರಳ ಮೂಲದ ಎನ್ನಲಾಗಿದ್ದು, 3ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದ ಎನ್ನಲಾಗಿದೆ.

ರೋಗಿಗಳಿಗೆ ಕ್ರೈಸ್ತ ಧರ್ಮದ ಕರಪತ್ರಗಳನ್ನ ಹಂಚಿಕೆ ಮಾಡುತ್ತಾ, ರೋಗಿಗಳ ಆರೋಗ್ಯ ತಪಾಸಣೆ ನೆಪದಲ್ಲಿ ಕ್ರೈಸ್ತ ಧರ್ಮದ ಪ್ರಚಾರ ಮಾಡಿ ಮತಾಂತರ ಮಾಡಲು ಯತ್ನಿಸುತ್ತಿದ್ದ ಆರೋಪ ಕೇಳಿ ಬಂದಿದೆ. ರೋಗಿಗಳಿಗೆ ಕರಪತ್ರ ಹಂಚಿಕೆ ಮಾಡ್ತಿದ್ದ ವೇಳೆಯೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದಾಳಿ ಮಾಡಿ ವಿದ್ಯಾರ್ಥಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Click

https://newsnotout.com/2024/10/darshan-thugudeepa-case-bail-issue-highcourt-appeal/
https://newsnotout.com/2024/10/dr-puneethrajkumar-kannada-news-sports-and-scam/
https://newsnotout.com/2024/10/covid-shield-kannada-news-supreme-court-viral-news/
https://newsnotout.com/2024/10/railway-rout-change-and-kannada-news-karnataka-d/
https://newsnotout.com/2024/10/school-teacher-attempt-to-harm-kannada-news-bengaluru/
https://newsnotout.com/2024/10/kannada-news-bengaluru-animal-kananda-news-m/
https://newsnotout.com/2024/10/coconut-tree-kannada-news-photo-viral-sayuktha-hegade/

Related posts

ಸಚಿವ ಮಧು ಬಂಗಾರಪ್ಪ ಕಾರು ಅಪಘಾತ, ಬೆಂಗಳೂರಿಗೆ ತೆರಳುತ್ತಿದ್ದಾಗ ನಡೆದ ದುರ್ಘಟನೆ

ಸಿಂಹಗಳಿಗೆ ಸೀತಾ-ಅಕ್ಬರ್ ನಾಮಕರಣ ಮಾಡಿದ್ದ ಅಧಿಕಾರಿ ಅಮಾನತ್ತು..! ಕೋರ್ಟ್ ಹೇಳಿದ್ದೇನು..?

ತಾಯಿಗೆ ನಿತ್ಯ ಥಳಿತ..! ಬರಿಗಾಲಿನಲ್ಲಿ 3 ಕಿ.ಮೀ ಪೊಲೀಸ್ ಠಾಣೆಗೆ ನಡೆದು ತಂದೆ ವಿರುದ್ಧವೇ ದೂರು ನೀಡಿದ 12 ರ ಬಾಲಕ!