Latestಕೇರಳಕ್ರೈಂ

ಕೇರಳ: ಮನೆಯಂಗಳದ ಬಾವಿಯಲ್ಲಿ 4 ತಿಂಗಳ ಹೆಣ್ಣು ಮಗುವಿನ ಶವ ಪತ್ತೆ..! 12 ವರ್ಷದ ಬಾಲಕಿ ಮಗುವನ್ನು ಕೊಂದಳಾ..?

755

ನ್ಯೂಸ್ ನಾಟೌಟ್: ಮನೆಯ ಬಾವಿಯೊಂದರಲ್ಲಿ 4 ತಿಂಗಳ ಹೆಣ್ಣು ಮಗುವಿನ ಶವ ಪತ್ತೆಯಾಗಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ವಲಸೆ ಕಾರ್ಮಿಕರು ವಾಸಿಸುತ್ತಿದ್ದ ಬಾಡಿಗೆ ಮನೆಯ ಬಾವಿಯಲ್ಲಿ ತಮಿಳುನಾಡಿನ ದಂಪತಿಗಳ ನಾಲ್ಕು ತಿಂಗಳ ಹೆಣ್ಣು ಮಗು ಶವವಾಗಿ ಪತ್ತೆಯಾಗಿದೆ. ಮಗುವನ್ನು ಕೊಲೆ ಮಾಡಿರುವುದು 12 ವರ್ಷದ ಬಾಲಕಿ ಎಂಬುದು ತಿಳಿದುಬಂದಿದೆ, ಆಕೆ ಕೂಡ ಅದೇ ಕುಟುಂಬದವಳಾಗಿದ್ದಾಳೆ ಎಂದು ವರದಿ ತಿಳಿಸಿದೆ.

ಮಗು ಬಂದಿದ್ದರಿಂದ ಕುಟುಂಬದವರಿಗೆ ತನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ ಎಂದು ಭಾವಿಸಿ ಮಗುವನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಆಕೆ ಅನಾಥೆಯಾಗಿದ್ದು, ಮಗುವಿನ ಪೋಷಕರು, ಆಕೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಆಗಿದ್ದರು. ಈ ಮಗು ಬಂದ ಮೇಲೆ ಎಲ್ಲರೂ ಮಗುವನ್ನೇ ಹೆಚ್ಚು ಇಷ್ಟ ಪಡುತ್ತಿದ್ದಾರೆಂದು ತಪ್ಪು ಭಾವಿಸಿ ಈ ಕೃತ್ಯವೆಸಗಿದ್ದಾಳೆ.

ರಾತ್ರಿ ಮಲಗಿದ್ದಾಗ ಶಿಶುವನ್ನು ಎತ್ತಿಕೊಂಡು ಹೋಗಿ, ಬಾಡಿಗೆ ಮನೆಯ ಬಳಿ ಇರುವ ಬಾವಿಗೆ ಎಸೆದಿದ್ದಾಳೆ ಎಂದು ಆರೋಪಿಸಲಾಗಿದೆ. ಕೇರಳಕ್ಕೆ ಕೆಲಸಕ್ಕಾಗಿ ವಲಸೆ ಬಂದಿದ್ದ ದಂಪತಿ ರಾತ್ರಿ 9.30ರ ಸುಮಾರಿಗೆ ತಮ್ಮ ಮನೆಯ ಹಾಲ್ ​ನಲ್ಲಿ ಮಲಗಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಮಗುವಿನ ತಾಯಿ ಎಚ್ಚರಗೊಂಡಾಗ ಮಗು ಇಲ್ಲದಿರುವುದನ್ನು ಕಂಡು ಪತಿಗೆ ತಿಳಿಸಿದ್ದಾಳೆ.

ನಂತರ ಮಗುವಿನ ಶವ ಬಾವಿಯಲ್ಲಿರುವುದು ಪತ್ತೆಯಾಗಿದೆ. ಮನೆ ಒಳಗಿಂದ ಲಾಕ್​ ಆಗಿದ್ದರಿಂದ ಆ ಬಾಲಕಿ ಮೇಲೆ ಎಲ್ಲರಿಗೂ ಅನುಮಾನ ಬಂದಿತ್ತು, ವಿಚಾರಣೆ ನಡೆಸಿದಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಶಿಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ:ನಡು ರಸ್ತೆಯಲ್ಲಿ ಭೀಕರ ಕೊಲೆಯ ದೃಶ್ಯದ ಶೂಟಿಂಗ್..! ಇಬ್ಬರು ಅರೆಸ್ಟ್..!

See also  ಗುತ್ತಿಗಾರು: ಕಳೆದ ಒಂದು ತಿಂಗಳಿನಿಂದ ಬಾಗಿಲು ಮುಚ್ಚಿಕೊಂಡಿದ್ದ ಎಟಿಎಂಗೆ ಮತ್ತೆ ಜೀವಕಳೆ!!ನೂತನ ಮೆಷಿನ್ ಅಳವಡಿಸಿದ ಬಳಿಕ ಗ್ರಾಹಕರಿಗೀಗ ರಿಲೀಫ್..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget