ಕ್ರೈಂ

5 ವರ್ಷದ ಬಾಲಕಿ ಮೇಲೆ ತಂದೆ ಮತ್ತು ಚಿಕ್ಕಪ್ಪನಿಂದಲೇ ಅತ್ಯಾಚಾರ..! 84 ವರ್ಷ ಜೈಲು, 3 ಲಕ್ಷ ದಂಡ!

329

ನ್ಯೂಸ್‌ ನಾಟೌಟ್‌:   ಐದು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಕೆರಳದ ಇಡುಕ್ಕಿಯಲ್ಲಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಮತ್ತು ಚಿಕ್ಕಪ್ಪನಿಗೆ ನ್ಯಾಯಾಲಯ ತಲಾ 84 ವರ್ಷ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ಮಾಡಿದೆ.

ಕೇರಳದ ದೇವಿಕುಲಂನಲ್ಲಿ ಇರುವ ಪೋಕ್ಸೋ ಫಾಸ್ಟ್‌ ಟ್ರ್ಯಾಕ್‌ ನ್ಯಾಯಾಲಯ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಇಬ್ಬರು ಅಪರಾಧಿಗಳಿಗೆ ತಲಾ 84 ವರ್ಷ ಕಠಿನ ಜೈಲು ಶಿಕ್ಷೆ ವಿಧಿಸಿದೆ.

ಐದು ವರ್ಷದ ಬಾಲಕಿಯ ಮೇಲೆ ತಂದೆಯೇ ಅತ್ಯಾಚಾರ ಎಸಗಿದ್ದು, ಜೊತೆಗೆ ಚಿಕ್ಕಪ್ಪ ಕೂಡ ಹೀನ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿಗಳ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ, ವಿಶೇಷ ನ್ಯಾಯಾಲಯವು ಇಬ್ಬರು ಅಪರಾಧಿಗಳಿಗೆ ತಲಾ ₹3 ಲಕ್ಷ ದಂಡವನ್ನು ವಿಧಿಸಿದೆ ಮತ್ತು ಅವರಿಂದ ವಸೂಲಿ ಮಾಡಿದ ಹಣವನ್ನು ಸಂತ್ರಸ್ತರಿಗೆ ನೀಡುವಂತೆ ಸೂಚಿಸಿದೆ.

2021ರಲ್ಲಿ ಸಂತ್ರಸ್ತೆ ಬಾಲಕಿ ತನ್ನ ಮನೆಯಲ್ಲಿ ಆಕೆಯ ತಂದೆ ಮತ್ತು ಚಿಕ್ಕಪ್ಪನಿಂದ ಪದೇ ಪದೇ ಅತ್ಯಾಚಾರಕ್ಕೊಳಗಾಗಿದ್ದಳು. ಡಿಸೆಂಬರ್ 24, 2021 ರಂದು ಬಾಲಕಿ ತೀವ್ರತರದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದಾಗ ಆಕೆಯನ್ನು ವೈದ್ಯರಲ್ಲಿಗೆ ಕರೆದೊಯ್ಯಲಾಗಿದೆ. ಆಗ ಪ್ರಕರಣ ಬೆಳಕಿಗೆ ಬಂದಿದೆ.

See also  ಕಾಲೇಜಿನಿಂದ ಮನೆಗೆ ಹೊರಟ ವಿದ್ಯಾರ್ಥಿನಿ ನಾಪತ್ತೆ, ನಾಪತ್ತೆಯಾದವಳಿಗಾಗಿ ತೀವ್ರ ಹುಡುಕಾಟ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget