ದೇಶ-ವಿದೇಶವೈರಲ್ ನ್ಯೂಸ್

ಕೇದಾರನಾಥದ ಮಾರ್ಗದಲ್ಲಿ ಭಾರೀ ಭೂಕುಸಿತ..! ಮೃತರ ಸಂಖ್ಯೆ 5ಕ್ಕೆ ಏರಿಕೆ, ಭಕ್ತರಿಗೆ ತೆರಳದಂತೆ ಎಚ್ಚರಿಕೆ..!

ನ್ಯೂಸ್‌ ನಾಟೌಟ್‌: ಕೇದಾರನಾಥಕ್ಕೆ ತೆರಳುವ ಮಾರ್ಗ ಮಧ್ಯೆ ಸೋಮವಾರ(ಸೆ.9) ಸಂಜೆ ಸಂಭವಿಸಿದ್ದ ಭೂಕುಸಿತ ಸಂಭವಿಸಿದೆ. ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳಡಿಯಿಂದ ನಾಲ್ವರು ಯಾತ್ರಾರ್ಥಿಗಳು ಮೃತದೇಹಗಳನ್ನು ಇಂದು (ಮಂಗಳವಾರ) ಹೊರತೆಗೆಯಲಾಗಿದೆ.

ಮೃತರನ್ನು ಮಧ್ಯಪ್ರದೇಶದ ದುರ್ಗಾಭಾಯಿ ಖಾಪರ್ (50,) ಸಮನ್ ಭಾಯ್ (50), ಗುಜರಾತ್‌ನ ಭರತ್ ಭಾಯಿ ನಿರಾಲಾಲ್ (52) ಮತ್ತು ನೇಪಾಳದ ತಿತ್ಲಿ ದೇವಿ (70) ಎಂದು ಗುರುತಿಸಲಾಗಿದೆ. ಅವಶೇಷಗಳಡಿಯಲ್ಲಿ ಇನ್ನಷ್ಟು ಯಾತ್ರಾರ್ಥಿಗಳು ಸಿಲುಕಿರುವ ಸಾಧ್ಯತೆಯಿದೆ ಎಂದು ರುದ್ರಪ್ರಯಾಗ ಪೊಲೀಸರು ತಿಳಿಸಿದ್ದಾರೆ.
ಕೇದಾರನಾಥಕ್ಕೆ ಭೇಟಿ ನೀಡಿದ್ದ ಯಾತ್ರಾರ್ಥಿಗಳ ತಂಡವೊಂದು ಸೋಮವಾರ ರಾತ್ರಿ 7.20ರ ಸುಮಾರಿಗೆ ಹಿಂದಿರುಗುತ್ತಿದ್ದ ವೇಳೆ ಭೂಕುಸಿತಕ್ಕೆ ಸಿಲುಕಿಕೊಂಡಿದ್ದರು. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು.

ಮಧ್ಯಪ್ರದೇಶದ ಗೋಪಾಲ್ (50) ಎಂಬವರ ಮೃತದೇಹ ಹೊರತೆಗೆಯಲಾಗಿತ್ತು. ಮೂವರನ್ನು ರಕ್ಷಣೆ ಮಾಡಲಾಗಿತ್ತು. ಪ್ರತಿಕೂಲ ಹವಾಮಾನ, ಗುಡ್ಡಜರಿತದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯುಂಟಾಗಿತ್ತು.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ.

Click

https://newsnotout.com/2024/09/iphone-16-and-pro-released-kannada-news-viral-news-technology/
https://newsnotout.com/2024/09/darshan-kannada-news-charge-sheet-kannada-news-shubha-poonja-and-ragini/#google_vignette
https://newsnotout.com/2024/09/railway-incident-kannada-news-gas-cylinder-kannada-news/

Related posts

ಕಿಚ್ಚನ ಪುತ್ರಿ ನಟಿಯಾಗಿ ಸಿನಿ ರಂಗಕ್ಕೆ ಎಂಟ್ರಿ..? ಸಾನ್ವಿ ಶೇರ್ ಮಾಡಿದ ಪೋಸ್ಟ್ ನಲ್ಲೇನಿದೆ..?

ಚಿಲ್ಲರೆಗಾಗಿ ಮಹಿಳಾ ಬಸ್ ಕಂಡಕ್ಟರ್‌ ಮೇಲೆ ಹಲ್ಲೆ..! ಏನಿದು ಘಟನೆ..?

ಬೆಳ್ಳಾರೆ: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ, ವಿದೇಶದಿಂದ ಬರುತ್ತಿದ್ದಾಗ ಸೆರೆಹಿಡಿದ ಎನ್ ಐಎ ಅಧಿಕಾರಿಗಳು