ವಿಡಿಯೋವೈರಲ್ ನ್ಯೂಸ್

ಕೇದಾರನಾಥ ದೇಗುಲದ ಹೊರಗೆ ಚಹಾ ವಿತರಿಸಿದ ರಾಹುಲ್‌ ಗಾಂಧಿ, ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಕಾಂಗ್ರೆಸ್‌ ನಾಯಕ ಹಾಗೂ ಸಂಸದ ರಾಹುಲ್‌ ಗಾಂಧಿ ಭಾನುವಾರ ಉತ್ತರಾಖಂಡದ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗಿದ ಬಳಿಕ ಅಲ್ಲಿ ಸರತಿಯಲ್ಲಿ ನಿಂತಿದ್ದ ತೀರ್ಥಯಾತ್ರಿಗಳಿಗೆ ಚಹಾ ವಿತರಿಸಿದ ವಿಡಿಯೋ ಈಗ ವೈರಲ್ ಆಗುತ್ತಿದೆ.

ರವಿವಾರ ತಮ್ಮ ಮೂರು ದಿನಗಳ ಉತ್ತರಾಖಂಡ ಭೇಟಿ ಆರಂಭಿಸಿದ ರಾಹುಲ್ ಗಾಂಧಿ, ದೇವಸ್ಥಾನಕ್ಕೆ ಪ್ರವೇಶಕ್ಕಾಗಿ ಸರತಿ ನಿಂತಿದ್ದ ಭಕ್ತರಿಗೆ ಚಹಾ ನೀಡಿದ್ದಾರೆ.
ರಾಹುಲ್‌ ಗಾಂಧಿ ಚಹಾ ನೀಡುತ್ತಿರುವುದನ್ನು ಕಂಡು ಅಚ್ಚರಿಗೊಂಡ ಭಕ್ತರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

“ಸರ್‌ ನಿಮ್ಮನ್ನು ನಾವು ಟಿವಿಯಲ್ಲಿ ಮಾತ್ರ ನೋಡಿದ್ದೆವು. ಈಗ ನಿಜವಾಗಿಯೂ ನೋಡುತ್ತಿದ್ದೇವೆ., ನಿಮ್ಮೊಂದಿಗೆ ಸೆಲ್ಫಿ ತೆಗೆಯಲೇ?” ಎಂದು ಒಬ್ಬ ವ್ಯಕ್ತಿ ರಾಹುಲ್‌ ಅವರನ್ನು ಕೇಳಿಕೊಂದ್ದಾರೆ.

ರಾಹುಲ್‌ ಕೇದಾರನಾಥ ದೇವಸ್ಥಾನದಲ್ಲಿ ಆರತಿಯಲ್ಲಿ ಪಾಲ್ಗೊಂಡರು. ದೇವಾಲಯ ಭೇಟಿಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Related posts

10 ವರ್ಷದ ಮಗನ ಮೇಲೆ ಕುಳಿತ 154 ಕೆಜಿ ತೂಕದ ತಾಯಿ..! ಪುಟ್ಟ ಬಾಲಕನ ದುರಂತ ಸಾವು..!

ರಾಜ್ಯದ ಪ್ರಖ್ಯಾತ ಪ್ರವಾಸಿ ನಗರದಲ್ಲಿ ಗಡಗಡ ನಡುಗಿದ ಭೂಮಿ..! ಮತ್ತೊಮ್ಮೆ ಭೂಕಂಪದ ಆತಂಕದಲ್ಲಿ ಜನತೆ..!

“ಯಾರೋ ಕಿತ್ತೋದ್‌ ನನ್ಮಗ ಟಿವಿಯಲ್ಲಿ ತಗಲಾಕೊಂಡ” ..! ವರ್ತೂರು ಸಂತೋಷ್ ಹುಲಿ ಉಗುರಿನ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಜಗ್ಗೇಶ್..!