ಕ್ರೈಂವಿಡಿಯೋವೈರಲ್ ನ್ಯೂಸ್

ಕೇದಾರನಾಥಕ್ಕೆ ಭಕ್ತರನ್ನು ಕರೆದೊಯ್ಯೊ ಕುದುರೆಗೆ ಬಲವಂತವಾಗಿ ಧೂಮಪಾನ ಮಾಡಿಸಿದ ಕ್ರೂರಿಗಳು! ಇಬ್ಬರ ವಿರುದ್ಧ ಎಫ್ಐಆರ್, ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್ : ಕೇದಾರನಾಥ ಟ್ರೆಕ್ ನಲ್ಲಿ ಇಬ್ಬರು ವ್ಯಕ್ತಿಗಳು ಕುದುರೆಗೆ ಧೂಮಪಾನ ಮಾಡಲು ಬಲವಂತಪಡಿಸಿದ ವೈರಲ್ ವೀಡಿಯೊ ತುಣುಕೊಂದನ್ನು ತನಿಖೆ ಮಾಡಲು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಪೊಲೀಸರು ಎಫ್ಐಆರ್ ದಾಖಲಿಸಿದ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ.

ವೀಡಿಯೊ ಕ್ಲಿಪ್ ನಲ್ಲಿ, ಇಬ್ಬರು ಪುರುಷರು ಕುದುರೆಗೆ ಅದರ ಮೂಗಿನ ಹೊಳ್ಳೆಗಳ ಮೂಲಕ ಧೂಮಪಾನ ಮಾಡಲು ಬಲವಂತಪಡಿಸಿದ್ದಾರೆ. ಒಬ್ಬ ವ್ಯಕ್ತಿ ಕುದುರೆಯ ಮೂಗಿನ ಹೊಳ್ಳೆಗಳನ್ನು ಹಾಗೂ ಅದರ ಬಾಯಿಯನ್ನು ತನ್ನ ಕೈಗಳಿಂದ ಮುಚ್ಚುತ್ತಿರುವುದು ಕಂಡುಬಂದರೆ, ಇನ್ನೊಬ್ಬ ದೂಮಪಾನದ ಕಡ್ಡಿಯಿಂದ ಧೂಮಪಾನ ಮಾಡಿಸುತ್ತಿದ್ದಾನೆ. ವೀಡಿಯೊದ ಕೊನೆಯಲ್ಲಿ ಕುದುರೆಯು ಹೊಗೆಯನ್ನು ಹೊರಹಾಕುತ್ತಿರುವುದನ್ನು ಸಹ ಕಾಣಬಹುದು.

“ಈ ವರ್ಷದ ಯಾತ್ರೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದಂತೆ ರುದ್ರಪ್ರಯಾಗ ಜಿಲ್ಲಾ ಪೊಲೀಸರು ಒಟ್ಟು 14 ಪ್ರಕರಣಗಳನ್ನು ದಾಖಲಿಸಿದ್ದಾರೆ” ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋಗೆ ಪ್ರತಿಕ್ರಿಯಿಸಿರುವ ರುದ್ರಪ್ರಯಾಗ ಪೊಲೀಸ್ ಇಲಾಖೆ, ಕುದುರೆ ಪಾಲಕನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

Related posts

ಆಂಜನೇಯ ಗುಡಿ ಪೂಜಾರಿಯ ಪತ್ನಿಗೆ ಮುಸ್ಲಿಂ ಯುವಕ ಮೆಸೇಜ್..! ಹನುಮ ಜಯಂತಿಯಂದೇ ಯುವಕನನ್ನು ಕೊಂದ ಅರ್ಚಕ

ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ಕಾರ್ಯಾಚರಣೆ, ಇಲ್ಲಿವೆ ಸಮುದ್ರದಲ್ಲಿ ನಡೆದ ಸಾಹಸಗಳ ಪೋಟೊಗಳು

ಸಿದ್ದರಾಮಯ್ಯರನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿ ಎಂದ ಆರ್‌.ಟಿ.ಐ ಕಾರ್ಯಕರ್ತ..! ಲೋಕಾಯುಕ್ತ ಕಚೇರಿಗೆ ಬಂದು ಮತ್ತೆ ದೂರು ನೀಡಿದ ಸ್ನೇಹಮಹಿ ಕೃಷ್ಣ..!