ನ್ಯೂಸ್ ನಾಟೌಟ್: ಕೇದಾರನಾಥ ದೇವಾಲಯದ ಬಳಿ ಯುವಕರು ನೃತ್ಯ ಮಾಡುತ್ತಾ ಡಿಜೆ ಹಾಡು ಹಾಕಿಕೊಂಡು ಕುಣಿಯುತ್ತಿರುವ ವೈರಲ್ ವಿಡಿಯೋಗೆ ಸಾರ್ಚಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಭಕ್ತರ ಪ್ರವೇಶಕ್ಕಾಗಿ ಕೇದಾರನಾಥ ದೇವಾಲಯವನ್ನು ತೆರೆಯುವ ಮುನ್ನ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಪವಿತ್ರ ಸ್ಥಳವನ್ನು ಅಗೌರವಿಸಿದ್ದಕ್ಕಾಗಿ ಆ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಯುವಕರು ನೃತ್ಯ ಮಾಡುತ್ತಾ ಜೋರಾಗಿ ಡಿಜೆ ಹಾಡು ಹಾಕಿದ್ದರು. ರುದ್ರಪ್ರಯಾಗ ಪೊಲೀಸರು ಆ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
People need to understand that Kedarnath Dham is not a club.
You can’t play DJ music and do vulgar dances at such a sacred place.
It’s unfortunate that many now visit these holy sites just to shoot reels, completely ignoring the sanctity of the place.As per the latest update,… pic.twitter.com/aRyhqPykEt
— Mr Sinha (@MrSinha_) May 6, 2025
ತನಿಖೆಗಳು ನಡೆಯುತ್ತಿವೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
BMTC ಬಸ್ ನಲ್ಲಿ ಮಹಿಳೆಗೆ ಸಹ ಪ್ರಯಾಣಿಕನಿಂದ ಲೈಂಗಿಕ ಕಿರುಕುಳ..! ವಿಡಿಯೋ ವೈರಲ್