ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಎರಡೇ ದಿನಕ್ಕೆ ‘ಕಾಟೇರ’ ಎಷ್ಟು ಕೋಟಿ ಗಳಿಸಿದೆ ಗೊತ್ತಾ..? ಈ ಬ್ಗಗೆ ದರ್ಶನ್ ಹೇಳಿದ್ದೇನು..?

183

ನ್ಯೂಸ್ ನಾಟೌಟ್ : ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ದರ್ಶನ್ ಹವಾ ಜೋರಾಗಿಯೇ ಬೀಸುತ್ತಿದ್ದು, ‘ಚಾಲೆಂಜಿಂಗ್​ ಸ್ಟಾರ್ ದರ್ಶನ್​ ನಟನೆಯ ‘ಕಾಟೇರ’ ಸಿನಿಮಾ ಸೂಪರ್​ ಹಿಟ್​ ಆಗುತ್ತಿದೆ. ಈ ಸಿನಿಮಾ ಎರಡನೇ ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಾಕ್ಸ್​ ಆಫೀಸ್​ನಲ್ಲಿ ತನ್ನ ನಾಗಾಲೋಟ ಮುಂದುವರಿಸಿದೆ.

ಚಿತ್ರತಂಡದ ಆಪ್ತ ಮೂಲಗಳು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಎರಡು ದಿನಕ್ಕೆ ‘ಕಾಟೇರ’ ಸಿನಿಮಾಗಳಿಸಿರುವುದು ಬರೋಬ್ಬರಿ 37.14 ಕೋಟಿ ರೂಪಾಯಿ ಎಂದು ವರದಿ ತಿಳಿಸಿದೆ. ಮೊದಲ ದಿನವಾದ ಡಿಸೆಂಬರ್​ 29ರಂದು ‘ಕಾಟೇರ’ ಸಿನಿಮಾ 19.79 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಎರಡನೇ ದಿನ 17.35 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಎರಡು ದಿನಕ್ಕೆ ಚಿತ್ರದ ಒಟ್ಟು ಕಲೆಕ್ಷನ್​ 37.14 ಕೋಟಿ ರೂಪಾಯಿ ಆಗಿದೆ. ಇದರಿಂದ ಚಿತ್ರತಂಡಕ್ಕೆ ಸಖತ್​ ಖುಷಿ ಆಗಿದೆ. ಅಂತಿಮವಾಗಿ ಈ ಚಿತ್ರದ ಕಲೆಕ್ಷನ್​ ಎಷ್ಟಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಭಾನುವಾರ (ಡಿ.31) ‘ಕಾಟೇರ’ ಸಿನಿಮಾಗೆ ಇನ್ನೂ ಹೆಚ್ಚಿನ ಕಲೆಕ್ಷನ್​ ಆಗುವ ನಿರೀಕ್ಷೆ ಇದ್ದು, ನಿರ್ದೇಶಕ ತರುಣ್​ ಸುಧೀರ್​ ಅವರ ಕೆಲಸಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಅಲ್ಲ. ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್​ ಆಗಿದೆ. ಹಾಗಿದ್ದರೂ ಕೂಡ ಈ ಪರಿ ಕಲೆಕ್ಷನ್​ ಮಾಡುತ್ತಿರುವುದು ಗಮನಾರ್ಹ ಬೆಳವಣಿಗೆ ಎನ್ನಲಾಗಿದೆ. ‘ಕಾಟೇರ’ ಯಶಸ್ಸಿನಿಂದ ದರ್ಶನ್​ ಖುಷಿ ಆಗಿದ್ದಾರೆ.

ಅದಕ್ಕಾಗಿ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಏನೆಂದು ನಾ ಹೇಳಲಿ.. ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯೆಲ್ಲಿ? ಧನ್ಯೋಸ್ಮಿ ಸೆಲೆಬ್ರಿಟಿಸ್. ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆಯಿಂದ ನಮ್ಮ ಕಾಟೇರ ಚಿತ್ರತಂಡದ ಮನ ತುಂಬಿದೆ. ಮಾತುಗಳೇ ಬರುತ್ತಿಲ್ಲ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.

https://newsnotout.com/2023/12/january-1-sim-and-transaction/
See also  ರಾತ್ರೋರಾತ್ರಿ ಪುತ್ತೂರಿನಲ್ಲಿ ಕಾಡಾನೆ ದಾಳಿ..! ಅಪಾರ ಬೆಳೆ ನಾಶ ಮಾಡಿದ್ದೆಲ್ಲಿ..? ಸ್ಥಳೀಯರಲ್ಲಿ ಆತಂಕ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget