ಭಕ್ತಿಭಾವ

ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಗೆ ತಾಯಿಯನ್ನು ಹೊತ್ತುಕೊಂಡೇ ಬಂದ ಮಗ..!

503

ನ್ಯೂಸ್ ನಾಟೌಟ್: ಶ್ರವಣ ಕುಮಾರ ತನ್ನ ತಂದೆ ತಂದೆ-ತಾಯಿಯನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ತೀರ್ಥಯಾತ್ರೆ ಹೋಗಿದ್ದನ್ನು ಕಥೆಗಳಲ್ಲಿ ಕೇಳಿದ್ದೇವೆ. ತೀರ ಇತ್ತೀಚಿಗೆ ತಾಯಿಯನ್ನು ಕೂರಿಸಿಕೊಂಡು ವ್ಯಕ್ತಿಯೊಬ್ಬ ತನ್ನ ಸ್ಕೂಟರ್‌ನಲ್ಲಿ ದೇಶ ಸುತ್ತಿಸಿದ್ದ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಇಳಿ ವಯಸ್ಸಿನ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯ ದರ್ಶನ ಮಾಡಿಸಿದ್ದಾನೆ.

ತಿಪಟೂರಿನ ಶಿವರುದ್ರಯ್ಯ ಎಂಬವರು ತಮ್ಮ 99 ವರ್ಷದ ಇಳಿ ವಯಸ್ಸಿನಲ್ಲಿರುವ ತಾಯಿಯನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊತ್ತುಕೊಂಡು ಬಂದಿದ್ದಾರೆ. ದೇವಿಯ ದರ್ಶನ ಮಾಡಿಸಿದ್ದಾರೆ. ತಿಪಟೂರಿನಿಂದ ತಾಯಿಯ ಜತೆ ಬಸ್‌ನಲ್ಲಿ ಹೊರಟ ಶಿವರುದ್ರಯ್ಯ ಬಸ್‌ ಇಳಿದ ಬಳಿಕ ತಾಯಿಯನ್ನು ದೇವಸ್ಥಾನದ ತನಕ ಹೆಗಲಿನಲ್ಲಿ ಹೊತ್ತುಕೊಂಡು ಬಂದಿದ್ದಾರೆ. ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ತಾಯಿಗೆ ಕಟೀಲು ದೇವಸ್ಥಾನಕ್ಕೆ ತೆರಳುವ ಆಸೆ ಇತ್ತು. ಈ ಆಸೆಯನ್ನು ಮಗ ಪೂರೈಸಿದ್ದಾನೆ. ಶಿವರುದ್ರಯ್ಯ ನವರು ತಾಯಿಯನ್ನು ಹೊತ್ತುಕೊಂಡು ದೇವಸ್ಥಾನಕ್ಕೆ ತೆರಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈಗಿನ ಕಾಲದಲ್ಲಿ ವಯಸ್ಸಾದ ತಂದೆ -ತಾಯಿಯನ್ನು ನೋಡಿಕೊಳ್ಳುವುದೇ ಕಷ್ಟ. ಅಂತಹುದರಲ್ಲಿ ತಾಯಿಯ ಆಸೆಯನ್ನು ಈಡೇರಿಸಿದ ಮಗನ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

See also  ಶ್ರೀ ಗುರು ರಾಘವೇಂದ್ರ ಮಠದ 4ನೇ ವರ್ಷದ ಪ್ರತಿಷ್ಠಾವಾರ್ಷಿಕ ಮಹೋತ್ಸವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget