ನಮ್ಮ ತುಳುವೇರ್

ಕಟಪಾಡಿ: ನಾಳೆ (ಡಿ.5) ‘ಸುಳಿವಾತ್ಮ ಎನ್ನೊಳಗೆ’ ನಾಟಕ ಪ್ರದರ್ಶನ

432

ನ್ಯೂಸ್ ನಾಟೌಟ್ : ವನಸುಮ ವೇದಿಕೆಯು  ಹಲವಾರು ವರ್ಷಗಳಿಂದ ಕಟಪಾಡಿ ಪರಿಸರದಲ್ಲಿ ಹಲವಾರು ರಂಗ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಇದೀಗ  ಸುಳಿವಾತ್ಮ ಎನ್ನೊಳಗೆ  ನಾಟಕ ಪ್ರದರ್ಶನ ಉದ್ಘಾಟನೆಯು ವನಸುಮ ವೇದಿಕೆ (ರಿ.) ಕಟಪಾಡಿ  ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ  ಸಹಯೋಗದಿಂದ  ಡಿ.5ರಂದು ಸೋಮವಾರ ಎಂಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಉಡುಪಿ ರಂಗಭೂಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಡೆಂಟ್ ಕೇರ್ ನ ಡಾ. ವಿಜಯೆಂದ್ರ ವಸಂತ್ ಹಾಗೂ  ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ,  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ , ರಂಗನಟ  ಪೆರ್ಡೂರು ರತ್ನಾಕರ ಕಲ್ಯಾಣಿ ಹಾಗೂ ಕಟಪಾಡಿಯ ವನಸುಮ ವೇದಿಕೆ(ರಿ.) ಅಧ್ಯಕ್ಷ  ಬಾಸುಮ ಕೊಡಗು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.  ಉಡುಪಿಯ ಕಟಪಾಡಿ ವನಸುಮ ವೇದಿಕೆಯ  ಪ್ರಧಾನ ಕಾರ್ಯದರ್ಶಿ , ಕಾವ್ಯವಾಣಿ ಕೊಡಗು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಲಿದ್ದಾರೆ.

See also  ತುಳು ಭಾಷೆಯ ನಾಟಕ 'ಶಿವದೂತೆ ಗುಳಿಗೆ' ಮಲಯಾಳಂ, ಮರಾಠಿ, ಇಂಗ್ಲಿಷ್‌ನಲ್ಲೂ ಪ್ರದರ್ಶನಕ್ಕೆ ಸಜ್ಜು, ತುಳು ಸಂಸ್ಕೃತಿಗೆ ಮತ್ತೊಂದು ಗೌರವ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget