ಕರಾವಳಿಸುಳ್ಯ

ಲೋಕಸಭಾ ಚುನಾವಣೆ ಹೊತ್ತಲ್ಲೇ 7.25 ಕೋಟಿ ರೂ ಖೋಟಾ ನೋಟು ಪತ್ತೆ ಪ್ರಕರಣ:ಸುಳ್ಯದ ವ್ಯಕ್ತಿ ಸಹಿತ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು!!

ನ್ಯೂಸ್‌ ನಾಟೌಟ್‌ : ಬಾಡಿಗೆ ಮನೆಯೊಂದರಲ್ಲಿ 2 ಸಾವಿರ ರೂ. ಮುಖಬೆಲೆಯ ಬರೋಬ್ಬರಿ 7.25 ಕೋಟಿ ರೂ ಪತ್ತೆಯಾಗಿರುವ ಘಟನೆ ಬಗ್ಗೆ ಕಾಂಜ್ಞಾಗಾಡ್ ಸಮೀಪದ ಅಂಬಲತ್ತರ ಪಾರಪಳ್ಳಿ ಗುರುಪುರದಲ್ಲಿ ಬೆಳಕಿಗೆ ಬಂದಿತ್ತು.ಇದೀಗ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಇವೆಲ್ಲವು ಖೋಟಾ ನೋಟುಗಳು ಎಂದು ತನಿಖೆಯಿಂದ ಸ್ಪಷ್ಟವಾಗಿದೆ.

ಅಂಬಲತ್ತರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಸುಳ್ಯದ ಸುಲೈಮನ್ ಹಾಗೂ ಪೆರಿಯಾ ನಿವಾಸಿ ಅಬ್ದುಲ್ ರಝಾಕ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಪುತ್ತೂರಿನ ವ್ಯಕ್ತಿಯೊರ್ವನ ಕೈವಾಡವಿದೆ ಎಂದು ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಈ ವ್ಯಕ್ತಿಯೇ ಖೋಟಾ ನೋಟುಗಳನ್ನು ಈ ಇಬ್ಬರಿಗೆ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.

https://newsnotout.com/2024/03/2000-notes-of-rs-7-crore-face-value-seized-by-police-at-kasaragod-at-dakshina-kannada/

ಸುಮಾರು ವರ್ಷದಿಂದ ಅಬ್ದುರ್ ರಝಾಕ್ ಎಂಬುವರು ಈ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ಆದರೆ ಅಬ್ದುಲ್ ರಝಾಕ್ ಮನೆಯನ್ನು ಬಾಡಿಗೆಗೆ ಪಡೆದಿರುವ ಬಗ್ಗೆ ಸ್ಥಳೀಯ ನಿವಾಸಿಗಳಿಗೆ ಯಾವುದೇ ಮಾಹಿತಿ ಇಲ್ಲ. ಈತ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಈತನ ಬಗ್ಗೆ ಕೆಲವರಿಗೆ ಅನುಮಾನ ಬಂದಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.ಆಗ ಪೊಲೀಸರು ಮನೆಯಲ್ಲಿ ಶೋಧ ನಡೆಸಿದಾಗ ನಿಷೇಧಿತ ನೋಟು ಪತ್ತೆಯಾಗಿದೆ. ಅಂಬಲತ್ತರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಪ್ರತೀಶ್ ನೇತೃತ್ವದಲ್ಲಿ ಬುಧವಾರ ರಾತ್ರಿ ಮನೆ ಮೇಲೆ ದಾಳಿ ನಡೆಸಿ ಹಣ ವಶಪಡಿಸಿ ಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಒಂದು ವರ್ಷದ ಹಿಂದೆ ನಿಷೇದಿತ 2000 ರೂ.ಗಳ ನಕಲಿ ನೋಟುಗಳನ್ನು ರಟ್ಟಿನ ಪೆಟ್ಟಿಗೆ ಮತ್ತು ಗೋಣಿಚೀಲಗಳಲ್ಲಿ ಬಚ್ಚಿಡಲಾಗಿತ್ತು.ಪುತ್ತೂರು ನಿವಾಸಿ ಮೂಲಕ ಈ ನೋಟುಗಳನ್ನು ಇಲ್ಲಿಗೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಖೋಟಾನೋಟುಗಳನ್ನು ವಿದೇಶದಲ್ಲಿ ಮುದ್ರಿಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.ಪೊಲೀಸರು ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.ತನಿಖೆ ಮುಂದುವರಿದಿದೆ.

Related posts

ಪುತ್ತೂರು ಶಾಸಕರ ವಿರುದ್ಧ ಸುಳ್ಯದ ಯುವಕನೋರ್ವನಿಂದ ನಿಂದನಾತ್ಮಕ ಬರಹ, ಯುವಕನ ಮನೆಗೆ ಹೋಗಿ ಪೋಸ್ಟ್ ಡಿಲೀಟ್ ಮಾಡಿ,ಕ್ಷಮೆ ಯಾಚಿಸುವಂತೆ ಹೇಳಿದ ಶಾಸಕರ ಅಭಿಮಾನಿ ಬಳಗ

ಕುಡಿದ ಮತ್ತಿನಲ್ಲಿ ಬೆಳ್ತಂಗಡಿ ಯುವಕನ ಮೇಲೆ ಬೆಂಗಳೂರಿನಲ್ಲಿ ಹಲ್ಲೆ, ಕ್ಷೇತ್ರದ ಯುವಕನಿಗಾಗಿ ಠಾಣೆ ಮೆಟ್ಟಿಲೇರಿದ ಶಾಸಕ ಹರೀಶ್ ಪೂಂಜಾ..!

ಕೈಗೆ ಕೋಳ ಹಾಕಿಸಿಕೊಂಡಿದ್ದಾಗಲೇ ಪೊಲೀಸರೆದುರು ಸಿಗರೇಟ್ ಸೇದಿ ರೀಲ್ಸ್ ಮಾಡಿದ ರೌಡಿ..! ಪೊಲೀಸರ ಹೆದರಿಕೆ ಇಲ್ಲದ ಈತನ ಮೇಲಿರುವ ಕೇಸ್ ಗಳೆಷ್ಟು ಗೊತ್ತಾ..?