ಕರಾವಳಿಕಾಸರಗೋಡುಕ್ರೈಂ

ಕಾಸರಗೋಡು : ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದೇಕೆ ಆ ಗುಂಪು? ಜಿಲ್ಲಾ ಪಂಚಾಯತ್ ಸದಸ್ಯನ ಬಂಧನ

244

ನ್ಯೂಸ್ ನಾಟೌಟ್ : ಪೊಲೀಸರ ಮೇಲೆ ಹ* ಲ್ಲೆ ಪ್ರಕರಣ ಸಂಬಂಧಪಟ್ಟಂತೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನನ್ನು ಮಂಜೇಶ್ವರ ಪೊಲೀಸರು ಇಂದು(ಸೆ.5) ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ, ಉಪ್ಪಳ ಹಿದಾಯತ್ ಬಜಾರ್ ಎಂಬಲ್ಲಿನ ಗೋಲ್ಡನ್ ಅಬ್ದುಲ್ ರಹ್ ಮಾನ್ (34) ಎಂದು ಗುರುತಿಸಲಾಗಿದೆ. ಅಬ್ದುಲ್ ರಹಮಾನ್ ಮನೆಯಿಂದಲೇ ಮಂಜೇಶ್ವರ ಪೊಲೀಸರು ಬಂಧಿಸಿದ್ದು, ಆದಿತ್ಯವಾರ ರಾತ್ರಿ ಉಪ್ಪಳ ಹಿದಾಯತ್ ನಗರದಲ್ಲಿ ಘಟನೆ ನಡೆದಿತ್ತು ಎನ್ನಲಾಗಿದೆ.

ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಜನರು ಗುಂಪುಗೂಡಿರುವುದನ್ನು ಕಂಡು ಸ್ಥಳಕ್ಕೆ ತೆರಳಿದ್ದ ಪೊಲೀಸರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಹಲ್ಲೆಯಿಂದ ಸಬ್ ಇನ್ಸ್ ಪೆಕ್ಟರ್ ಪಿ.ಅನೂಪ್ ಸೇರಿದಂತೆ ಇಬ್ಬರು ಪೊಲೀಸರು ಗಾಯಗೊಂಡಿದ್ದರು. ಹಲ್ಲೆ ಗೈದ ತಂಡದಲ್ಲಿ ಅಬ್ದುಲ್ ರಹ್ ಮಾನ್ ಕೂಡಾ ಇದ್ದ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ರಶೀದ್, ಅಫೈಲ್ ಸೇರಿದಂತೆ ಮತ್ತಿಬ್ಬರನ್ನು ಸೋಮವಾರ ಪೊಲೀಸರು ಬಂಧಿಸಿದ್ದು, ಉಳಿದ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಲೀಸರ ಮೇಲಿನ ಹ* ಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ, ತನಿಖೆಯ ಬಳಿಕವಷ್ಟೇ ಮಾಹಿತಿ ಹೊರಬೀಳಲಿದೆ ಎಂದು ವರದಿ ತಿಳಿಸಿದೆ.

See also  'ಅಧಿಕಾರಕ್ಕೆ ಬಂದು ಕೆಲವೇ ದಿನವಷ್ಟೇ ಆಗಿದೆ, ಆಕ್ರಮಣಕಾರಿಯಾಗಿ ವರ್ತಿಸಬೇಡಿ', DCM ಡಿ.ಕೆ. ಶಿವ ಕುಮಾರ್‌ಗೆ ತಮಿಳುನಾಡು ಸಚಿವ ಹೇಳಿದ್ದೇನು?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget