ಕಾಸರಗೋಡುಕ್ರೈಂ

ಕಾಸರಗೋಡು: ತಡರಾತ್ರಿ ಅಗ್ನಿಗಾಹುತಿಯಾದ 5 ಅಂಗಡಿಗಳು..! 3 ಗಂಟೆಗಳ ಕಾಲ ಉರಿದ ಬೆಂಕಿ

ನ್ಯೂಸ್ ನಾಟೌಟ್: ಬೆಂಕಿಯ ಅವಘಡಕ್ಕೆ ಐದು ಅಂಗಡಿಗಳು ಹೊತ್ತಿ ಉರಿದ ಘಟನೆ ಶನಿವಾರ(ಡಿ.21) ತಡರಾತ್ರಿ ಕಾಸರಗೋಡಿನ ಪೆರ್ಲ ಬಳಿ ನಡೆದಿದೆ.

ಪೆರ್ಲ ಪೇಟೆಯಲ್ಲಿರುವ ಪೂಜಾ ಫ್ಯಾನ್ಸಿ , ಗೋಪಿನಾಥ್ ಪೈ ಕ್ಲೋತ್ ಸೆಂಟರ್, ಪತ್ರಿಕಾ ವಿತರಣಾ ಮಳಿಗೆ, ಪ್ರವೀಣ್ ಆಟೋ ಮೊಬೈಲ್, ಸಾದತ್ ಸ್ಟೋರ್, ಗೌತಮ್ ಕೋಲ್ಡ್ ಹೌಸ್ ಮೊದಲಾದವು ಸಂಪೂರ್ಣ ಉರಿದು ಕರಕಲಾಗಿದೆ.

ರಾತ್ರಿ 12ಗಂಟೆ ಸುಮಾರಿಗೆ ಘಟನೆ ನಡೆದಿದ್ದು , ಉಪ್ಪಳ ಕಾಸರಗೋಡಿನಿಂದ ಆಗಮಿಸಿದ ಐದು ಅಗ್ನಿಶಾಮಕ ದಳದ ಸಿಬ್ಬಂದಿ‌ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ.

ಮೂರು ಗಂಟೆಗೂ ಅಧಿಕ ಸಮಯದ ಬಳಿಕ ಬೆಂಕಿಯನ್ನು ನಂದಿಸಲಾಯಿತು. ಶಾರ್ಟ್ ಸರ್ಕ್ಯೂಟ್ ಬೆಂಕಿ ಅನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

Related posts

ಸುಳ್ಯದಲ್ಲಿ ಫ್ಯಾನ್ಸಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿಗೆ ಕಿರುಕುಳ

ಡಿಸಿ, ಎಸ್​ಪಿ ಮುಂದೆಯೇ ರೌಡಿಶೀಟರ್​ಗೆ ಕಾಂಗ್ರೆಸ್ ಶಾಸಕನಿಂದ ಭರ್ಜರಿ ಸನ್ಮಾನ..! ಸಾರ್ವಜನಿಕವಾಗಿ ಮುಜುಗರಕ್ಕೀಡಾದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ..!

ಲಾರಿ ಚಾಲನೆಯಲ್ಲಿರುವಾಗ ಬಾಧಿಸಿದ ಮೂರ್ಛೆ ರೋಗ, ಪೆಟ್ರೋಲ್ ಬಂಕ್ ಗೆ ನುಗ್ಗಿದ ಲಾರಿ !