ಕರಾವಳಿಕಾಸರಗೋಡುಕ್ರೈಂ

ಕಾಸರಗೋಡು: ಒಂದೇ ಕುಟುಂಬದ ಮೂವರ ನಿಗೂಢ ಸಾವು..! ವಸತಿ ಗೃಹದಲ್ಲಿ ಮೃತದೇಹಗಳು ಪತ್ತೆ..!

138

ನ್ಯೂಸ್ ನಾಟೌಟ್: ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನ ಕಾಞಂಗಾಡ್ ನಲ್ಲಿ ಶನಿವಾರ(ಫೆ.೧೭) ಬೆಳಗ್ಗೆ ಬೆಳಕಿಗೆ ಬಂದಿದೆ. ಸೂರ್ಯ ಪ್ರಕಾಶ್(55), ಅವರ ಪತ್ನಿ ಗೀತಾ(48) ಮತ್ತು ಸೂರ್ಯಪ್ರಕಾಶ್ ತಾಯಿ ಲೀಲಾ (90) ಮೃತಪಟ್ಟವರು ಎಂದು ವರದಿ ತಿಳಿಸಿದೆ.

ಇವರು ಮೃತದೇಹಗಳು ಇಲ್ಲಿನ ರೈಲ್ವೆ ನಿಲ್ದಾಣ ಪರಿಸರದ ಅವಿಕ್ಕರೆಯಲ್ಲಿರುವ ವಸತಿ ಗೃಹದಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ಮೃತರ ಪೈಕಿ ಸೂರ್ಯ ಪ್ರಕಾಶ್ ಕಾಞಂಗಾಡ್ ನಲ್ಲಿ ವಾಚ್ ವರ್ಕ್ಸ್ ಮಳಿಗೆ ನಡೆಸುತ್ತಿದ್ದರು.

ಇವರಿಗೆ ಮೂವರು ಮಕ್ಕಳಿದ್ದು, ಈ ಪೈಕಿ ಇಬ್ಬರು ಪುತ್ರಿಯರಿಗೆ ವಿವಾಹವಾಗಿದೆ. ಪುತ್ರ ಮನೆಯಲ್ಲಿದ್ದು, ಉದ್ಯೋಗ ನಿಮಿತ್ತ ಎರ್ನಾಕುಲಂ ಗೆ ತೆರಳಿದ್ದರು. ಸದ್ಯ ಮನೆಯಲ್ಲಿ ಮೂವರು ಮಾತ್ರ ಇದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮಾಹಿತಿ ತಿಳಿದು ಹೊಸದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

https://newsnotout.com/2024/02/muslim-hubballi-issue/
See also  ಅರಂತೋಡಿನಲ್ಲಿ ಹೋಟೆಲ್ ಸ್ಮಾರ್ಟ್ ಕಿಚನ್ ಶುಭಾರಂಭ
    Ad Widget     Ad Widget   Ad Widget   Ad Widget   Ad Widget