ಕಾಸರಗೋಡುಕ್ರೈಂ

ಕಾಸರಗೋಡು: ಕತ್ತಿಯಿಂದ ಪತ್ನಿ ಮೇಲೆ ಹಲ್ಲೆ! ರೊಚ್ಚಿಗೆದ್ದ ಪತ್ನಿಯಿಂದ ಪತಿಯ ಬರ್ಬರ ಕೊಲೆ!

352

ನ್ಯೂಸ್ ನಾಟೌಟ್ : ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿಯನ್ನು ಕಡಿದು ಕೊಲೆಗೈದ ಘಟನೆ ಕಾಸರಗೋಡಿನ ಪಾಣತ್ತೂರಿ ನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಪುತ್ತೂರಡ್ಕದ ಬಾಬು(54) ಮೃತ ಎಂಬವರು ಕೊಲೆಯಾದ ವ್ಯಕ್ತಿ. ಕೃತ್ಯಕ್ಕೆ ಸಂಬಂಧ ಪಟ್ಟಂತೆ ಪತ್ನಿ ಸೀಮಂತಿನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರತಿನಿತ್ಯ ಮನೆಯಲ್ಲಿ ಜಗಳ ನಡೆಯುತ್ತಿತ್ತು ಆದರೆ ಅಂದು ಸಂಜೆ ವೇಳೆ ಮನೆಗೆ ಬಂದ ಬಾಬು ಜಗಳವಾಡಿ ಕತ್ತಿಯಿಂದ ಪತ್ನಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ, ರೊಚ್ಚಿಗೆದ್ದ ಪತ್ನಿ ಅದೇ ಕತ್ತಿ ಯಿಂದ ತನ್ನ ಪತಿ ಬಾಬುವನ್ನು ಕಡಿದು ಕೊಲೆ ಗೈದಿದ್ದಾಳೆ ಎಮದು ವರದಿ ತಿಳಿಸಿದೆ. ಮನೆಯಲ್ಲಿ ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಬಾಬು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು, ಕೂಡಲೇ ರಾಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಾಮಿಸಿದ ಪೊಲೀಸರು ಪತ್ನಿ ಸೀಮಂತಿನಿಯನ್ನು ವಶಕ್ಕೆ ತೆಗೆದುಕೊಂಡು, ಗಾಯಗೊಂಡಿರುವ ಸೀಮಂತಿನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಪತಿಯ ಮೃತ ದೇಹದ ಮಹಜರು ನಡೆಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ಸ್ಥಳೀಯರ ಮಾಹಿತಿ ಆಧರಿಸಿ ಪತ್ನಿಯ ಮೇಲೆ ಎಫ್ ಐ ಆರ್ ದಾಖಲಾಗಿದೆ.

See also  ಅಪರೂಪದ 'ಗಿಟಾರ್ ಫಿಶ್' ಪತ್ತೆ,ಕಾಸರಗೋಡಿನ ಸಮುದ್ರದ ತೀರದಲ್ಲಿ ವಿಸ್ಮಯ!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget