ಕಾಸರಗೋಡುಕ್ರೈಂ

ಕಾಸರಗೋಡು: ಮಗನ ಆತ್ಮಹತ್ಯೆಯ ಬೆನ್ನಲ್ಲೇ ಸಮುದ್ರಕ್ಕೆ ಹಾರಿ ಪ್ರಾಣ ಬಿಟ್ಟ ತಂದೆ..! ಒಂದೇ ತಿಂಗಳಲ್ಲಿ ಅಪ್ಪ-ಮಗನ ದಾರುಣ ಸಾವಿನ ಕಥೆ

45
Spread the love

ನ್ಯೂಸ್ ನಾಟೌಟ್: ಮಗನ ಆತ್ಮಹತ್ಯೆಯ ಬೆನ್ನಲ್ಲೇ ತಂದೆಯೂ ಸಾವಿಗೆ ಶರಣಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಎಂಬವರ ಮೃತದೇಹ ಸೋಮವಾರ ಬೆಳಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ತಿಂಗಳ ಹಿಂದೆ ಲೋಕೇಶ್ ಅವರ ಪುತ್ರ ರಾಜೇಶ್ ಆತ್ಮಹತ್ಯೆ ಮಾಡಿದ್ದು ಪುತ್ರ ಶೋಕದಲ್ಲಿದ್ದ ತಂದೆಯೂ ಆತ್ಮಹತ್ಯೆಗೈದಿದ್ದಾರೆ.

ಮೃತ ಲೋಕೇಶ್ ಅವರ ಪುತ್ರ ರಾಜೇಶ್ (26) ಕಳೆದ ಜು.10 ರಂದು ನಾಪತ್ತೆಯಾಗಿದ್ದು, ಆತನ ಮೃತದೇಹ ಜು.12 ರಂದು ಬೆಳಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು. ಮಗನ ಅಗಲಿಕೆ ಬಳಿಕ ತಂದೆ ಲೋಕೇಶ್ ಶೋಕತಪ್ತರಾಗಿ ಮಾನಸಿಕವಾಗಿ ಕುಗ್ಗಿದ್ದರು.

ಆ.13 ರಂದು ಬೆಳಗ್ಗೆ 9.00 ಗಂಟೆಯ ವೇಳೆ ಪರಿಸರದ ಕೆಲವು ಮಂದಿಗೆ ಲೋಕೇಶ್ ರವರು ಮೊಬೈಲ್ ಮೂಲಕ ವಾಟ್ಸಪ್ ಆಡಿಯೋ ಸಂದೇಶ ಕಳುಹಿಸಿ “ನಾನು ಈಗ ಸೋಮೇಶ್ವರಕ್ಕೆ ಹೋಗಿ ಸಮುದ್ರಕ್ಕೆ ಹಾರುತ್ತೇನೆ. ನನ್ನ ಹೆಣ ಉಳ್ಳಾಲದಲ್ಲಿ ಸಿಗಬಹುದು” ನಾನು ಮೊಬೈಲ್ ಕೊಂಡು ಹೋಗುವುದಿಲ್ಲ ಮನೆಯಲ್ಲಿ ಇಟ್ಟು ಹೋಗ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದರು.

ವಾಟ್ಸಪ್ ಸಂದೇಶ ಕೇಳಿದ ಕೂಡಲೇ ಪರಿಸರದವರು ಕರೆ ಮಾಡಿದಾಗ ಮನೆ ಮಂದಿ ಕಾಲ್ ರಿಸೀವ್ ಮಾಡಿದ್ದರು. ಆಗ ಮನೆ ಮಂದಿ ಲೋಕೇಶ್ ರವರು ಮೊಬೈಲ್ ಮನೆಯಲ್ಲಿ ಇಟ್ಟು ಹೊರ ಹೋದ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಈ ವಿಷಯವನ್ನು ಉಳ್ಳಾಲ ಠಾಣೆಗೆ ಮನೆಯವರು ಹಾಗೂ ಪರಿಸರ ನಿವಾಸಿಗಳು ತಿಳಿಸಿದ್ದರು. ಸೋಮವಾರ 11.00 ಗಂಟೆ ವೇಳೆ ಲೋಕೇಶ್ ಅವರ ಮೃತದೇಹ ಉಳ್ಳಾಲದಲ್ಲಿ ಮೀನುಗಾರರಿಗೆ ಸಿಕ್ಕಿದೆ.

ಯುವಕ ರಾಜೇಶ್ ಆತ್ಮಹತ್ಯೆಯ ತಿಂಗಳ ಅಂತರದಲ್ಲಿ ಆತನ ತಂದೆ ಲೋಕೇಶ್ ಕೂಡ ಆತ್ಮಹತ್ಯೆಗೈದಿರುವುದು ಮನೆಮಂದಿ ,ಮತ್ತು ನರೆಹೊರೆಯವರನ್ನ ಆತಂಕಕ್ಕೀಡು ಮಾಡಿದೆ.

See also  ನೀನಾಸಂಗೆ ಬೆಳ್ಳಿಪ್ಪಾಡಿಯ ಪ್ರತಿಭಾವಂತ ಯುವತಿ ಆಯ್ಕೆ, ಗಡಿನಾಡ ಕನ್ನಡತಿಯ ಪ್ರಯತ್ನಕ್ಕೊಲಿದ ಅದೃಷ್ಟ
  Ad Widget   Ad Widget   Ad Widget   Ad Widget