ಕಾಸರಗೋಡುಕ್ರೈಂ

ಕಾಸರಗೋಡು: ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆ ತಲವಾರಿನಿಂದ ದಾಳಿ..! ಚಿಕಿತ್ಸೆ ಫಲಿಸದೆ ಸಾವು..!

ನ್ಯೂಸ್‌ ನಾಟೌಟ್: ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಅವರ ಪತಿಯೇ ಇರಿದು ಕೊಲೆಗೈದಿದ್ದಾನೆ ಎನ್ನಲಾದ ಘಟನೆ ಕಾಸರಗೋಡಿನ ಕಣ್ಣೂರು, ಕರಿವೆಳ್ಳೂರಿನಲ್ಲಿ ಗುರುವಾರ(ನ.21) ಸಂಜೆ ನಡೆದಿದೆ.

ಕಾಸರಗೋಡು ಚಂದೇರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ದಿವ್ಯಶ್ರೀ ಕೊಲೆಯಾದವರು ಎಂದು ಗುರುತಿಸಲಾಗಿದೆ. ಆಕೆಯ ಪತಿ ರಾಜೇಶ್ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರ ಗಾಯಗೊಂಡ ದಿವ್ಯಶ್ರೀಯನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ದಿವ್ಯಶ್ರೀ ಹಾಗೂ ರಾಜೇಶ್ ನಡುವೆ ದಾಂಪತ್ಯ ಸಮಸ್ಯೆ ಉಂಟಾಗಿತ್ತು .ಇದರಿಂದ ಕೆಲ ದಿನಗಳಿಂದ ಇಬ್ಬರೂ ಬೇರ್ಪಟ್ಟು ವಾಸವಾಗಿದ್ದರು ಎನ್ನಲಾಗಿದೆ. ಸಂಜೆಯ ವೇಳೆ ತಲವಾರು ಹಿಡಿದುಕೊಂಡು ಬಂದ ರಾಜೇಶ್ ದಿವ್ಯಶ್ರೀ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಮುಖ ಹಾಗೂ ಕುತ್ತಿಗೆಗೆ ಗಂಭೀರ ಗಾಯವಾಗಿತ್ತು. ಈ ವೇಳೆ ತಡೆಯಲು ಬಂದ ಆಕೆಯ ತಂದೆಗೂ ಗಾಯಗಳಾಗಿವೆ. ಬೊಬ್ಬೆ ಕೇಳಿ ಸ್ಥಳೀಯರು ಓಡಿ ಬಂದಿದ್ದು, ಈ ವೇಳೆ ರಾಜೇಶ್ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

35 ತುಂಡುಗಳಾಗಿ ಕತ್ತರಿಸಿದ ಪ್ರಕರಣ: ಭಯಾನಕ ವಿವರ ಬಿಚ್ಚಿಟ್ಟ 6,600 ಪುಟಗಳ ಚಾರ್ಜ್‌ಶೀಟ್ !

ಕಾರು-ಬೈಕ್ ಅಪಘಾತ: ಓರ್ವ ಸಾವು, ಮತ್ತೋರ್ವ ಗಂಭೀರ

ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣಗೆ ಲಕ್ಷ..ಲಕ್ಷ ರೂ. ಪಂಗನಾಮ ಹಾಕಿದ ಮ್ಯಾನೇಜರ್‌..! ರೊಚ್ಚಿಗೆದ್ದ ನಟಿ ಮಾಡಿದ್ದೇನು ಗೊತ್ತಾ?