Uncategorized

ಕಾಸರಗೋಡಿನಲ್ಲಿ ದುರಂತ, ಶಾಲಾ ಮಕ್ಕಳ ಕಾರ್ಯಕ್ರಮದ ವೇಳೆ ಮಗುಚಿ ಬಿದ್ದ ಚಪ್ಪರ

ನ್ಯೂಸ್ ನಾಟೌಟ್ : ಕಾಸರಗೋಡಿನ ಮಂಜೇಶ್ವರ ಬಳಿ ವಿದ್ಯಾರ್ಥಿಗಳ ಕಾರ್ಯಕ್ರಮವೊಂದರಲ್ಲಿ ತಾತ್ಕಾಲಿಕ ಚಪ್ಪರ ಬಿದ್ದು 25 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಾಥಮಿಕ ಚಿಕಿತ್ಸೆಯನ್ನು ಕಾಸರಗೋಡಿನಲ್ಲಿ ನೀಡಿ ಇದೀಗ ಗಾಯಾಳು ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಎರಡು ದಿನಗಳ ವಿದ್ಯಾರ್ಥಿಗಳ ಕಾರ್ಯಕ್ರಮ ಗುರುವಾರ ಆರಂಭವಾಗಿತ್ತು. ಇಂದು (ಶುಕ್ರವಾರ) ಕಾರ್ಯಕ್ರಮದ ಅಂತಿಮ ದಿನವಾಗಿತ್ತು. ಮಕ್ಕಳು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಅಂತಿಮ ದಿನ ಸಂಭವಿಸಿದ ಅವಘಡದಲ್ಲಿ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Related posts

ಹಾಸನ ಸಂಸದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹವಾಗುವುದರ ಹಿಂದಿದೆ 7 ಕಾರಣ..! ಯಾವುದೆಲ್ಲ ಏಳು ಕಾರಣ..? ಇಲ್ಲಿದೆ ಫುಲ್ ಡಿಟೇಲ್ಸ್

ಅಪರೂಪದಲ್ಲಿ ಅಪರೂಪ ‘ಬಾಂಬೆ ಬ್ಲಡ್’ ಗ್ರೂಪ್..! 15ರ ಬಾಲಕಿಗೆ ‘ಬಾಂಬೆ ಬ್ಲಡ್’ ದಾನ ಮಾಡಿ ಮಾನವೀಯತೆ ಮೆರೆದ ವಿಜಯಪುರದ ಚಾಲಕ..!

ಹೆಣ್ಣು ಮಕ್ಕಳು ಬೆಳಗ್ಗೆ ನೈಟಿ ಹಾಕಿದ್ರೆ 2 ಸಾವಿರ ರೂ. ದಂಡ..!