ಕಾಸರಗೋಡುಕ್ರೈಂವೈರಲ್ ನ್ಯೂಸ್

ಕಾಸರಗೋಡು: ಸಂಜೆ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ದಿಢೀರ್ ನಾಪತ್ತೆ..! ಕೆರೆಯಲ್ಲಿ 3 ವರ್ಷದ ಮಗುವಿನ ಶವ ಪತ್ತೆ..!

256

ನ್ಯೂಸ್ ನಾಟೌಟ್: ಕೆರೆಗೆ ಬಿದ್ದು ಮೂರು ವರ್ಷದ ಮಗುವೊಂದು ಮೃತಪಟ್ಟ ಘಟನೆ ಕಾಸರಗೋಡಿನ ಬೆದ್ರಡ್ಕ ಕಂಬಾರ್ ಎಂಬಲ್ಲಿ ರವಿವಾರ(ಸೆ.29) ಸಂಜೆ ನಡೆದಿದೆ.
ಕಂಬಾರು ನಿವಾಸಿ ನೌಶಾದ್ ಎಂಬವರ ಪುತ್ರ ಮುಹಮ್ಮದ್ ಸೌಹಾನ್ ಹಬೀಬ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.

ಸಂಜೆ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ದಿಢೀರ್ ನಾಪತ್ತೆಯಾಗಿತ್ತು. ತೀವ್ರ ಹುಡುಕಾಟದ ಬಳಿಕ ಮನೆ ಸಮೀಪದ 200 ಮೀಟರ್ ದೂರದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಮಗು ಪತ್ತೆಯಾಗಿದೆ.

ಕೃಷಿಕರಾದ ನೌಶಾದ್ ಅವರ ಏಕೈಕ ಪುತ್ರನಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/09/sameer-acharya-kananda-news-police-case-kannada-news/
https://newsnotout.com/2024/09/mallikarjun-karge-and-narendra-modi-viral-news-health-kannada-news/
See also  ಬ್ಯಾಂಕ್‌ ನೌಕರರಿಗೆ ಇನ್ನು ವಾರಕ್ಕೆ 5 ದಿನ ಮಾತ್ರ ಕೆಲಸ..? ಏನಿದು ಹೊಸ ನಿಯಮ..?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget