Latestಕಾಸರಗೋಡುಕ್ರೈಂ

ಕಾಸರಗೋಡು: ತೋಟದ ಕೆರೆಯಲ್ಲಿ ತಾಯಿ ಮತ್ತು 2 ವರ್ಷದ ಮಗುವಿನ ಮೃತದೇಹ ಪತ್ತೆ..! ಪ್ರಕರಣ ದಾಖಲು..!

861

ನ್ಯೂಸ್ ನಾಟೌಟ್: ತೋಟದ ಕೆರೆಯಲ್ಲಿ ತಾಯಿ ಮತ್ತು ಎರಡು ವರ್ಷದ ಮಗು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ(ಫೆ.21) ಸಂಜೆ ಕಾಸರಗೋಡಿನ ಪೆರ್ಲ ಉಕ್ಕಿನಡ್ಕ ಸಮೀಪದ ಏಳ್ಕಾನದಲ್ಲಿ ನಡೆದಿದೆ.

ಉಕ್ಕಿನಡ್ಕ ಬಳಿಯ ಏಳ್ಕಾನ‌ ದಟ್ಟಿಗೆಮೂಲೆಯ ಈಶ್ವರ ನಾಯ್ಕ ಎಂಬವರ ಪತ್ನಿ ಪರಮೇಶ್ವರಿ (42), ಪುತ್ರಿ ಪದ್ಮಿನಿ (2) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಪತಿ ಈಶ್ವರ ನಾಯ್ಕ ಹಾಗೂ ಅವರ ಪುತ್ರ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಸಂಜೆ ಹಿಂತಿರುಗಿ ಬಂದಾಗ ಮನೆಯಿಂದ ಇಬ್ಬರು ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಕಂಗಿನ ತೋಟದ ಕೆರೆಯಲ್ಲಿ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಕೇರಳ: ಅಬಕಾರಿ ಅಧಿಕಾರಿ ಸಹಿತ ಒಂದೇ ಕುಟುಂಬದ ಮೂವರು ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆ..! ಹುಡುಕಿಕೊಂಡು ಬಂದ ಸಹೋದ್ಯೋಗಿಗಳು..!

ಸ್ಥಳೀಯರು ಇಬ್ಬರನ್ನು ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ‌ ಇಬ್ಬರೂ ಮೃತಪಟ್ಟಿದ್ದರು. ಬದಿಯಡ್ಕ ಪೊಲೀಸರು‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಅಳುತ್ತಲೇ ನ್ಯೂಸ್ ಓದಿದ ಟಿವಿ ನಿರೂಪಕಿ..! ಅಷ್ಟಕ್ಕೂ ಅಲ್ಲೇನಾಯ್ತು..? ಇಲ್ಲಿದೆ ವೈರಲ್ ವಿಡಿಯೋ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget