ಕರಾವಳಿರಾಜಕೀಯ

ಮಲೆನಾಡ ನೂತನ ವಿಮಾನ ನಿಲ್ದಾಣ ಉದ್ಘಾಟಿಸಿದ ಮೋದಿ

ನ್ಯೂಸ್ ನಾಟೌಟ್: ಶಿವಮೊಗ್ಗದ ಬಹುಕಾಲದ ಕನಸಾದ ನೂತನ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆ.27ರಂದು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.

ಮೊದಲು ಮುಖ್ಯ ನಗರಗಳಲ್ಲಿ ಮಾತ್ರ ಅಭಿವೃದ್ಧಿಯಾಗುತ್ತಿತ್ತು. ಈಗ ಹಳ್ಳಿ ಹಳ್ಳಿಗಳಿಗೆ ಅಭಿವೃದ್ದಿ ತಲುಪುತ್ತಿದೆ. ಬಿಜೆಪಿಯ ಡಬಲ್ ಇಂಜಿನ್ ಸರಕಾರದ ಪ್ರಗತಿ ರಥ ವೇಗದಿಂದ ಓಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

450 ಕೋಟಿ ರೂ ವೆಚ್ಚದ ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ಮತ್ತು ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರ ವಿಮಾನವು ನೂತನ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಕಾರ್ಯಕ್ರಮಕ್ಕೂ ಮೊದಲು ಪಿಎಂ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣದ ಪ್ರತಿಕೃತಿಯನ್ನು ವೀಕ್ಷಿಸಿ ಮಾಹಿತಿ ಪಡೆದರು.

Related posts

ಪುತ್ತೂರು: ಡಾಂಬರ್‌ನಲ್ಲಿ ಸಿಲುಕಿದ ನಾಗರಹಾವನ್ನು ರಕ್ಷಿಸಿದ ಉರಗ ಪ್ರೇಮಿ ಯಾರು? ಎರಡು ದಿನಗಳ ಪ್ರಯತ್ನ ಕೊನೆಗೂ ಫಲ ಕೊಡ್ತಾ..?

ಸಂಪಾಜೆ: ಜೇನುಪೆಟ್ಟಿಗೆ ಕಳ್ಳರ ಹಾವಳಿ

ಉಪ್ಪಿನಂಗಡಿ: ಆಶ್ರಮದ ಹೆಸರಿನಲ್ಲಿ ಹಣ ವಸೂಲಿ ದಂಧೆ!,ನಕಲಿ ಐಡಿ ಕಾರ್ಡ್ ಬಳಸಿ ಮಹಿಳೆಯರಿಂದ ಭಿಕ್ಷಾಟನೆ