Latestಕ್ರೈಂರಾಜ್ಯವೈರಲ್ ನ್ಯೂಸ್

ಕರ್ನಾಟಕದ ವಿಜಯಪುರದಲ್ಲಿ ಕೇಳಿಬಂದ ಭಾರಿ ಶಬ್ದ..! ಭೂಕಂಪವೆಂದು ಬೆಚ್ಚಿದ ಜನ..!

918

ನ್ಯೂಸ್‌ ನಾಟೌಟ್: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹಡಗಿನಾಳ ಹಾಗೂ ಇತರೆ ಗ್ರಾಮಗಳಲ್ಲಿ ಇಂದು ಭೂಮಿಯಾಳದಿಂದ ಭಾರಿ ಶಬ್ದ ಇಂದು(ಎ.1)ಕೇಳಿಬಂದಿದೆ.

ನಗರದ ಕೆಹೆಚ್ ​​ಬಿ ಕಾಲೊನಿ, ಬ್ಯಾಂಕರ್ಸ್ ಕಾಲೊನಿ, ಸದಾಶಿವ ನಗರ, ಆಕೃತಿ ಕಾಲೊನಿಗಳ ನಿವಾಸಿಗಳಿಗೂ ಶಬ್ದ ಕೇಳಿಸಿದೆ.

ಭೂಮಿ ನಡುಗಿದಂತೆ ಅನುಭವವಾಗಿದೆ. ಭೂಕಂಪನಕ್ಕೆ ಮನೆಯೊಳಗಿನ ಪಾತ್ರೆಗಳು ಅಲ್ಲಾಡಿ ಬಿದ್ದಿವೆ ಎಂದು ಜನರು ಹೇಳಿದ್ದಾರೆ.

ಥೈಲ್ಯಾಂಡ್‌ ನ ಬ್ಯಾಂಕಾಂಕ್ ಹಾಗೂ ಇತರೆಡೆಗಳಲ್ಲಿ ಭೂಕಂಪವಾಗಿರುವುದರಿಂದಾಗಿ ಇಲ್ಲಿಯೂ ಭೂಕಂಪವಾಗಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಸದ್ಯ ಇದು ಭೂಕಂಪವೇ ಅಥವಾ ಭೂಮಿಯಿಂದ ಬಂದಿರುವ ಶಬ್ದವೇ ಎಂಬುದರ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಬೇಕಿದೆ.

ಇದನ್ನೂ ಓದಿವಿವಾದಿತ ಆಧ್ಯಾತ್ಮಿಕ ಗುರು ನಿತ್ಯಾನಂದ ಸಾವು ವದಂತಿ..! ಆ ಒಂದು ವಿಡಿಯೋ ನೀಡಿದ ಸುಳಿವೇನು..?

See also  ಸುಳ್ಯ: ಅಪರಿಚಿತ ವ್ಯಕ್ತಿಯೋರ್ವನಿಂದ ತೋಟಕ್ಕೆ ನುಗ್ಗಿ ಅಡಿಕೆ ಕಳ್ಳತನ..! ಈತನ ಬಳಿ ಯಾರೂ ವ್ಯವಹಾರ ಮಾಡದಂತೆ ಸೂಚನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget