ಸುಳ್ಯ

ಸುಳ್ಯ: ಸೋನಾ ಅಡ್ಕಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ, ಖ್ಯಾತ ನಟಿಯಿಂದ ಬಹುಮುಖ ಪ್ರತಿಭೆಗೆ ಸನ್ಮಾನ

148

ನ್ಯೂಸ್‌ ನಾಟೌಟ್‌: ಯೋಗಾಸನದಲ್ಲಿ ರಾಜ್ಯದ ಗಮನ ಸೆಳೆದ, ಬಹುಮುಖ ಪ್ರತಿಭೆ ಸುಳ್ಯದ ಗ್ರಾಮೀಣ ಪ್ರತಿಭೆ ಸೋನಾ ಅಡ್ಕಾರ್‌ ಗೆ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ.

ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ (ರಿ) ಬೆಂಗಳೂರು ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಮಹಾರಾಣಿ ಕಾಲೇಜು ಸಮೀಪದ ಭಾರತ್‌ ಸ್ಕೌಟ್‌ ಆ್ಯಂಡ್‌ ಗೈಡ್ಸ್ ಆಡಿಟೋರಿಯಂನಲ್ಲಿ ಭಾನುವಾರ (ನ.17) ಆಯೋಜಿಸಿದ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಪ್ರೇಮಾ, ನಟ ಅಂಜನ್‌ ಮತ್ತಿತರ ಗಣ್ಯರು ಸೇರಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನಿಸಿದರು.

ಸೋನಾ ಅಡ್ಕಾರ್‌ ಸುಳ್ಯದ ಸೈಂಟ್‌ ಜೋಸೆಫ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಶರತ್‌ ಅಡ್ಕಾರ್‌ ಹಾಗೂ ಶೋಭಾ ಅಡ್ಕಾರ್‌ ದಂಪತಿಯ ಪುತ್ರಿ.

See also  ಗುತ್ತಿಗಾರು: 43 ವರ್ಷದ ಮಹಿಳೆ ಹೃದಯಾಘಾತಕ್ಕೆ ಬಲಿ, ಇಬ್ಬರು ಮಕ್ಕಳು ಸಹಿತ ಕಣ್ಣೀರಾದ ಕುಟುಂಬ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget