ಬೆಂಗಳೂರು

RachitaRam: ಲಾಲ್‌ಬಾಗ್‌ ಕಾರ್ಮಿಕನಿಗೆ ಡಿಕ್ಕಿ ಹೊಡೆದ ರಚಿತಾರಾಮ್ ಕಾರು:ಕ್ಷಮೆ ಕೇಳದ ನಟಿಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು,ಏನಿದು ಘಟನೆ?

ನ್ಯೂಸ್ ನಾಟೌಟ್ : ಸ್ವಾತಂತ್ರೋತ್ಸವ ಪ್ರಯುಕ್ತ ಲಾಲ್‌ಬಾಗ್ ನಲ್ಲಿ ವಿಶೇಷವಾಗಿ ಫಲಪುಷ್ಪ ಪ್ರದರ್ಶನ(lalbagh flower show) ಏರ್ಪಡಿಸಲಾಗುತ್ತದೆ. 214ನೇ ಫ್ಲವರ್ ಶೋ ಇದಾಗಿದ್ದು,ಇದನ್ನು ಸಿಎಂ‌ ಸಿದ್ದರಾಮಯ್ಯರನವರು ಉದ್ಘಾಟನೆ ಮಾಡಿದ್ದರು. ಇದನ್ನು ವೀಕ್ಷಿಸೋದಕ್ಕೆ ನಟಿ ರಚಿತಾ ರಾಮ್‌ ಅವರು ನಿನ್ನೆ ಸಂಜೆ ವೇಳೆ ಭೇಟಿ ನೀಡಿದ್ದರು. ಅಲ್ಲಿಂದ ವಾಪಸ್‌ ತೆರಳುವಾಗ ನಟಿ ಇದ್ದ ಕಾರು ಪೌರ ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಘಟನೆಯಿಂದ ಅದೃಷ್ಟವಶಾತ್‌ ಯಾರಿಗೂ ಯಾವುದೇ ಅನಾಹುತವಾಗಿಲ್ಲ.ಆದರೆ,ಅಪಘಾತ ನಡೆದ ಬಳಿಕವೂ ನಟಿ ರಚಿತಾ ರಾಮ್‌ (Rachita Ram) ಅವರು ಸೌಜನ್ಯಕ್ಕೂ ಕ್ಷಮೆ ಕೇಳದೆ ಹೋಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪೌರ ಕಾರ್ಮಿಕನ ಆರೋಗ್ಯವನ್ನಾದರೂ ವಿಚಾರಿಸಬಹುದಾಗಿತ್ತು.ಪ್ರತಿಯೊಬ್ಬ ಮನುಷ್ಯನ ಜೀವಕ್ಕೆ ಬೆಲೆ ಇದೆ. ಆದರೆ ನಟಿ ಕಾರನ್ನು ಡಿಕ್ಕಿ ಹೊಡೆಸಿದ್ದಲ್ಲದೇ ತಿರುಗಿಯೂ ನೋಡದೇ ಹೋಗಿದ್ದು ಸಾರ್ವಜನಿಕರು ಸಿಡಿದೇಳುವುದಕ್ಕೆ ಕಾರಣವಾಗಿದೆ.

ಚಾಲಕನ ನಿರ್ಲಕ್ಷ್ಯವೋ ಅಥವಾ ಕಾರ್ಮಿಕನ ನಿರ್ಲಕ್ಷ್ಯವೋ ಗೊತ್ತಿಲ್ಲ. ಆದರೆ, ಕಾರಿನಡಿ ಸಿಲುಕಿದ್ದರೆ ಕಾರ್ಮಿಕನ ಜೀವಕ್ಕೆ ಕಂಟಕವಾಗುತ್ತಿತ್ತು. ಅದೃಷ್ಟವಶಾತ್‌ ದೊಡ್ಡದಾಗಿ ಆಗುವ ಅನಾಹುತ ತಪ್ಪಿದೆ. ಅಪಘಾತದ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರು ಗುದ್ದಿದ್ದಕ್ಕೆ ಕಾರ್ಮಿಕನಿಗೆ ನಟಿ ಕ್ಷಮೆಯಾಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related posts

ಘಟಾನುಘಟಿ ನಾಯಕರನ್ನು ಮಕಾಡೆ ಮಲಗಿಸಿದ ಮತದಾರ..!

ಚಂದ್ರಯಾನ 3ಕ್ಕೂ ಮುನ್ನ ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು..? ಪೂಜೆ ಸಲ್ಲಿಸಿದರ ಹಿಂದಿನ ರಹಸ್ಯವೇನು?

KSRTC: ಸರ್ಕಾರಿ ಸಾರಿಗೆ ಬಸ್ ಗಳ ದರ ಏರಿಕೆ..! ಡೀಸೆಲ್ – ಪೆಟ್ರೋಲ್, ಹಾಲು ಈಗ ಬಸ್ ದರವೂ ಹೆಚ್ಚಳಕ್ಕೆ ಸಿದ್ಧತೆ..! ಇಲ್ಲಿದೆ ಸಂಪೂರ್ಣ ಮಾಹಿತಿ