ಕ್ರೈಂವೈರಲ್ ನ್ಯೂಸ್

ಕರ್ನಾಟಕದ ಐಪಿಎಸ್ ಅಧಿಕಾರಿ ತಮಿಳ್ ನಾಡಲ್ಲಿ ಅರೆಸ್ಟ್ ಆಗಿದ್ದೇಕೆ..? ಇಲ್ಲಿದೆ ಪೊಲೀಸರ ನಡುವಿನ ಹೊಡೆದಾಟದ ಕಥೆ..!

ನ್ಯೂಸ್ ನಾಟೌಟ್: ರಾಜ್ಯಗಳ ಆಂತರಿಕ ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ನೀಯೋಜಿಸಲಾಗುವುದು ಆದರೆ, ಪೊಲೀಸರೇ ಅನಾಗರಿಕರಾಗಿ ನಡೆದುಕೊಳ್ಳುವುದು ವಿಪರ್ಯಾಸ. ಮಹಿಳಾ ಸಹೋದ್ಯೋಗಿ ಮೇಲೆ ಹಲ್ಲೆ ನಡೆಸಿರುವ ಆರೋಪ ಹಿನ್ನೆಲೆ ಕರ್ನಾಟಕದ ಐಪಿಎಸ್‌ ಪೊಲೀಸ್ ಅಧಿಕಾರಿಯೊಬ್ಬರನ್ನು ತಮಿಳನಾಡಿನ ಈರೋಡ್ ಜಿಲ್ಲೆಯ ಗೋಬಿ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಬಂಧಿತರು ಎಂದು ಗುರುತಿಸಲಾಗಿದ್ದು, ಕಲಬುರಗಿ ಎಸ್​​ಪಿ ಆಗಿರುವ ಐಪಿಎಸ್ ಅಧಿಕಾರಿ. ಸುಜಾತ ಎಂಬ ಸಿಬ್ಬಂದಿ ಜೊತೆ ತಿರುಚ್ಚಿಗೆ ತೆರಳಿದ್ದ ವೇಳೆ ತಿರುಚ್ಚಿಯ ಶ್ರೀರಂಗಂನಲ್ಲಿ ಸುಜಾತ ಹಾಗೂ ಅರುಣ್ ಮಧ್ಯೆ ಜಗಳವಾಗಿದೆ.

ಸ್ಥಳೀಯ ಪೊಲೀಸರು ರಾಜೀ ಮಾಡಿ ಕಳಿಸಿದ್ದರು. ಆ ಬಳಿಕ ಸುಜಾತರನ್ನು ಹುಟ್ಟೂರಿಗೆ ಕರೆದೊಯ್ದಿದ್ದ ಅರುಣ್ ರಂಗರಾಜನ್, ಮನೆಯಲ್ಲಿಯೂ ಸುಜಾತ ಮೇಲೆ ಹಲ್ಲೆ ನಡೆಸಿದ್ದಾರೆಂದು ಮಹಿಳೆ ಆರೋಪಿಸಿದ್ದಾಳೆ.

ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್, ಪತ್ನಿಯನ್ನು ಅಕ್ರಮವಾಗಿ ಬಂಧನಲ್ಲಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮಹಿಳೆಯ ಪತಿ 2023 ಮಾರ್ಚ್‌ ನಲ್ಲಿ ಈ ಬಗ್ಗೆ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಸೆಕ್ಷನ್ 323, 324,498,376 ಅಡಿ ದೂರು ದಾಖಲಿಸಿದ್ದರು. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸರು ಚಾರ್ಜ್ ಶೀಟ್ ದಾಖಲಾಗಿತ್ತು.

ಕಳೆದ ಜ.16ರಂದು ಚಾರ್ಜ್ ಶೀಟ್ ಸಲ್ಲಿಕೆ ಆಗಿತ್ತು. ಈ ಮಧ್ಯೆ ಮತ್ತೆ ಸುಜಾತರನ್ನ ತಮಿಳುನಾಡಿಗೆ ಕರೆದೊಯ್ದಿದ್ದ ಅರುಣ್ ರಂಗರಾಜನ್. ತಿರುಚ್ಚಿಯ ಶ್ರೀರಂಗಂನಲ್ಲಿ ಸುಜಾತ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಸುಜಾತ ಗೋಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು, ಅರುಣ್ ರಂಗರಾಜ‌ನ್ ರನ್ನ ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಬಳಿಕ ಕೋರ್ಟ್‌ನಲ್ಲಿ ಜಾಮೀನು ಅರುಣ್ ರಂಗರಾಜನ್ ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ.

Related posts

ರಾತ್ರಿ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಕಾರು..! ಮರದಲ್ಲಿ ನೇತಾಡುತ್ತಿದ್ದ ಬೆಸ್ಕಾಂ ಸಿಬ್ಬಂದಿಯ ಶವ..!

4ನೇ ಬಾರಿ CM ಆಗಿ ಪ್ರಮಾಣ ವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು..! ಆಂಧ್ರಕ್ಕೆ ಬಂದ ನರೇಂದ್ರ ಮೋದಿ, ಇಲ್ಲಿದೆ ವಿಡಿಯೋ

ಕುಸ್ತಿ ಕ್ಷೇತ್ರ ತೊರೆಯುವ ಬೆದರಿಕೆ ಒಡ್ಡಿದಳಾ ಸಾಕ್ಷಿ ಮಲಿಕ್..? ಒಲಿಂಪಿಕ್ಸ್​ ಪದಕ ವಿಜೇತೆ ಹೀಗೆ ಹೇಳಿದ್ದೇಕೆ? ​