ಬೆಂಗಳೂರು

ಲವ್ ಫೇಲ್ಯೂರ್‌ , ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ,ಡೆತ್‌ನೋಟ್‌ನಲ್ಲೇನಿದೆ?

ನ್ಯೂಸ್ ನಾಟೌಟ್ :  ಪ್ರೀತಿ ವಿಫಲವಾಗಿದ್ದಕ್ಕೆ ಯುವಕನೋರ್ವ (Love Failure) ಆತ್ಮಹತ್ಯೆ್ಎ ಶರಣಾಗಿರುವ ಘಟನೆ ವರದಿಯಾಗಿದೆ.ತಾನು ಪ್ರೀತಿಸಿದ ಯುವತಿ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ದಾರುಣ ಅಂತ್ಯವನ್ನೇ ಕಂಡಿದ್ದಾನೆ.

ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಜೆಎಸ್‌ ನಗರದಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕನನ್ನು ನವೀನ್‌ (27) ಎಂದು ಗುರುತಿಸಲಾಗಿದೆ. ಮೃತ ನವೀನ್ ಕುಟುಂಬಸ್ಥರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆತ ಡೆತ್‌ ನೋಟ್‌ ಕೂಡ ಬರೆದಿಟ್ಟಿದ್ದು, ಇದು ಲಭ್ಯವಾಗಿದೆ. ಡೆತ್ ನೋಟ್ ಬರೆದಿಟ್ಟ ಬಳಿಕ ಆತ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ತಿಲಿದು ಬಂದಿದೆ.ಡೆತ್‌ ನೋಟ್‌ ಪಕ್ಕದಲ್ಲೇ ವಿಷದ ಬಾಟಲಿ ಕೂಡಾ ಸಿಕ್ಕಿದ್ದು,ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಕೊಳ್ಳೆಗಾಲದ ಯುವಕ ನವೀನ್ ತನ್ನ ಮನೆಯವರ ಜತೆ ಬೆಂಗಳೂರಿನಲ್ಲಿ ವಾಸವಾಗಿದ್ದು,ಬಾಳೆಮಂಡಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.ಈ ವೇಳೆ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದು, ಆಕೆ ಕೆಲವು ಸಮಯ ಆತನ ಜತೆ ಉತ್ತಮ ಒಡನಾಟ ಹೊಂದಿದ್ದಳೆಂಬ ಮಾಹಿತಿಯಿದೆ. ಪ್ರೀತಿ ಮತ್ತು ಮದುವೆಯ ವಿಚಾರಕ್ಕೆ ಬಂದಾಗ ಆಕೆ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲವೆಂದು ಹೇಳಲಾಗಿದೆ.

ನಿನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತೇನೆ,ಚೆನ್ನಾಗಿ ನೋಡ್ಕೊಳ್ತೇನೆ ಎಂದು ಹೇಳಿದರೂ ಆಕೆ ನನ್ನ ಪ್ರೀತಿಯನ್ನು ಒಪ್ಪೋದಕ್ಕೆ ಸಿದ್ದಳಿರಲಿಲ್ಲ. ಆಕೆಯ ಪ್ರೀತಿ ಇಲ್ಲದೆ ನಾನು ಭೂಮಿ ಮೇಲೆ ಇರಲಾರೆ ಎಂದೆಲ್ಲಾ ಬರೆದಿರುವ ಆತ ಆಕೆಯ ಹೆಸರನ್ನೂ ಕೂಡಾ ಉಲ್ಲೇಖಿಸಲಾಗಿದೆ.

ಸದ್ಯ ಕುಟುಂಬಸ್ಥರ ದೂರಿನಂತೆ ಘಟನೆ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರಿಕ್ಷೆಗೆ ರವಾನೆ ಮಾಡಲಾಗಿದೆ. ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Related posts

ಬಿಜೆಪಿ ನಾಯಕ ಪ್ರತಾಪ್ ಸಿಂಹ ನ್ಯೂ ಹೇರ್ ಸ್ಟೈಲ್..! ‘ಬೈ ಬೇಡ್ರೋ .. ಹುಣಸೂರು ಆದಿವಾಸಿ ಹೇರ್ ಆಯಿಲ್ ಜಾಹೀರಾತು..!’

ಬಾಡಿ ಬಿಲ್ಡಿಂಗ್ ನಲ್ಲಿ ಖ್ಯಾತಿಗಳಿಸಿದ್ದ ಆಂಧ್ರ ಮೂಲ ವ್ಯಕ್ತಿ ಬೆಂಗಳೂರಿನಲ್ಲಿ ಸರಗಳ್ಳ! ಈತನನ್ನು ಹೆಡೆಮುರಿ ಕಟ್ಟಿದ್ದೇ ಒಂದು ರೋಚಕ ಕಾರ್ಯಾಚರಣೆ..!

ಬೀದಿ ನಾಯಿಗಳಿಗೆ ಆಹಾರ ನೀಡುವುದಕ್ಕೂ ಮಾರ್ಗಸೂಚಿ ಬಿಡುಗಡೆ..! ಇಲ್ಲಿದೆ ಸಂಪೂರ್ಣ ಮಾಹಿತಿ