ಕರಾವಳಿಪುತ್ತೂರುರಾಜಕೀಯ

ಪುತ್ತೂರು ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಹರಿಹಾಯ್ದ ಕಲ್ಲಡ್ಕ ಪ್ರಭಾಕರ್ ಭಟ್

283

ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಅದ್ದೂರಿ ಬಿಜೆಪಿ ಪ್ರಚಾರ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರ ಬಗ್ಗೆ ಕಿಡಿಕಾರಿದ್ದಾರೆ

ಅರುಣ್ ಕುಮಾರ್ ಅವರಿಗೆ ಬಿಜೆಪಿ ಬಿಟ್ಟರೆ ಬೇರೆ ಅಸ್ತಿತ್ವವೇ ಇಲ್ಲ ಎಂದು ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಹೇಳಿದ್ದಾರೆ.ಬಿಜೆಪಿ ಟಿಕೆಟ್‌ ಕೊಟ್ಟಿಲ್ಲ ಎಂಬ ಕಾರಣಕ್ಕೆ ಬಂಡಾಯವಾಗಿ ಕಣಕ್ಕಿಳಿದಿರುವ ಅರುಣ್‌ ಕುಮಾರ್‌ ಪುತ್ತಿಲ ಅವರ ವಿರುದ್ಧ ಹರಿಹಾಯ್ದರು. ಅವರಿಗೆ ನಾನು ಗೆಲ್ಲಬೇಕು ಎಂಬುದು ಇದೆ. ಯಾರ ಆಧಾರದಿಂದ ಗೊತ್ತಾ? ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್‌ ಅವರ ಆಧಾರದಿಂದ ಗೆಲ್ಲಬೇಕು ಅನ್ನುವ ಮನಸ್ಸಿದೆ. ನೀವು ವಿರೋಧ ಮಾಡುತ್ತಾ ಇರುವುದು ಮೋದಿ, ಅಮಿತ್ ಷಾ, ಯೋಗಿಯನ್ನು. ಮೋದಿ, ಯೋಗಿ, ಅಮಿತ್ ಶಾ ಎಲ್ಲರೂ ಬಿಜೆಪಿಯ ನಾಯಕರೇ. ಅವರ ಬಲವೇ ಇವರಿಗೆ ಬೇಕಂತೆ. ಇವರಿಗೆ ಬಿಜೆಪಿ ಬಿಟ್ರೆ ಮತ್ತೆ ಅಸ್ತಿತ್ವ ಇದ್ಯಾ?ʼʼ ಎಂದು ಪ್ರಭಾಕರ್ ಬಟ್ ಪ್ರಶ್ನಿಸಿದರು.

ನೀವು ಈಗ್ಲೇ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದೀರಿ. ಮುಂದೆ ಹೇಗೆ ಅನ್ನೋದು ಈಗಲೇ ಗೊತ್ತಾಗುತ್ತಿದೆ. ಹಿಂದುತ್ವದ ನಿಜವಾದ ಅರ್ಥದಲ್ಲಿ ಇರೋದು ಬಿಜೆಪಿ ಮಾತ್ರ. ಬಿಜೆಪಿ ಪಕ್ಷವನ್ನು ಬೆಂಬಲಿಸಿದರೆ ಮಾತ್ರ ಅದು ಪುಣ್ಯದ ಕೆಲಸ, ಇಲ್ಲಂದ್ರೆ ಪಾಪದ ಕೆಲಸ ಎಂದು ಹೇಳಿದರು.

See also  ಗಾಂಜಾ ಸೇವನೆ ಪ್ರಕರಣ, ಕಲ್ಲುಗುಂಡಿಯ ಯುವಕರಿಗೆ ಶಿಕ್ಷೆ ಪ್ರಕಟ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget