ಕರಾವಳಿಬೆಂಗಳೂರುರಾಜಕೀಯ

ಅದ್ದೂರಿ ಮೆರವಣಿಗೆಯಲ್ಲಿ ಸಾಗಿ ಬಂದು ನಾಮಪತ್ರ ಸಲ್ಲಿಸಿದ ಮಾಜಿ ಸಚಿವ,9ನೇ ಬಾರಿ ನಾಮಪತ್ರ ಸಲ್ಲಿಕೆಗೆ ಕಾರ್ಯಕರ್ತರು,ಬೆಂಬಲಿಗರ ಸಾಥ್

ನ್ಯೂಸ್ ನಾಟೌಟ್ : ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ 9ನೇ ಬಾರಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅದ್ದೂರಿ ಮೆರವಣಿಯೊಂದಿಗೆ ನಾಮಪತ್ರ ಸಲ್ಲಿಸಿದರು.ಗುರುವಾರ ಏ.21ರಂದು ಇವರಿಗೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು,ಅಭಿಮಾನಿಗಳು,ಬೆಂಬಲಿಗರು ಕೈ ಜೋಡಿಸಿದರು.

ಬೆಳಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರ, ಶ್ರೀ ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ, ಬಿ.ಸಿ.ರೋಡು ಶ್ರೀ ರಕ್ತೇಶ್ವರೀ ದೇವಸ್ಥಾನ, ಮೊಡಂಕಾಪು ಬಾಲಯೇಸು ಚರ್ಚ್‌, ಮಿತ್ತಬೈಲು ಮಸೀದಿ, ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕೊಂಬು, ಚೆಂಡೆ, ವಾದ್ಯಘೋಷ ಮೆರುಗು ಮೆರವಣಿಗೆಗೆ ಮೆರುಗು ತಂದವು.

Related posts

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಎಚ್ಚರ! ನಾಗರಿಕರ ದೂರು ಕೇಳಲು ಬಂದಿದೆ ಹೊಸ ಆ್ಯಪ್

ಸುಳ್ಯ: ಹೃದಯಾಘಾತದಿಂದ ಸಾವಿಗೀಡಾದ ವ್ಯಕ್ತಿಯ ಶವ ಕೊಂಡೊಯ್ಯಲು ಸಂಬಂಧಿಕರೇ ಬರಲಿಲ್ಲ..! ಕೊನೆಗೆ ಪೊಲೀಸರೇ ನಡೆಸಿದರು ಅಂತ್ಯಕ್ರಿಯೆ..!

ಮರ್ಕಂಜದಲ್ಲಿ ಮತ್ತೆ ಗಣಿಗಾರಿಕೆ ಸದ್ದು..! ಕೆರಳಿ ಕೆಂಡವಾದ ಊರುವರು, ಸ್ಥಳಕ್ಕೆ ಓಡೋಡಿ ಬಂದ್ರು ತಹಶೀಲ್ದಾರ್..!