ದೇಶ-ಪ್ರಪಂಚ

ಟ್ರಾನ್ಸ್‌ ಲೇಷನ್‌ಆ್ಯಪ್‌ಗೆ ಅವಲಂಬಿತರಾಗಿದ್ದೀರಾ?ಪೊಲೀಸರ ಅತಿಥಿಯಾಗಬಹುದು ಜೋಕೆ..!ಟ್ರಾನ್ಸ್‌ ಲೇಷನ್‌ Appನ ಯಡವಟ್ಟಿನಿಂದಾಗಿ ಇಲ್ಲೊಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದೇಕೆ?

ನ್ಯೂಸ್ ನಾಟೌಟ್ : ತಂತ್ರಜ್ಞಾನದ ಜಗತ್ತು ಎಷ್ಟು ಪ್ರಯೋಜನಕಾರಿಯಾಗಿದೆಯೋ ಅಷ್ಟೇ ಎಡವಟ್ಟುಗಳನ್ನು ಕೂಡ ಮಾಡುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎಂಬಂತಿದೆ.ಕೆಲವೊಂದು ಪದಗಳನ್ನು ಹುಡುಕಲು ಹೊರಟಾಗ ಯಾವುದೋ ಅರ್ಥವನ್ನು ಹೇಳುವ ಟ್ರಾನ್ಸ್‌ಸ್ಲೇಶನ್ ಆ್ಯಪ್‌ಗಳಿಗೆ ಅವಲಂಬಿತರಾಗಿದ್ದರೆ ಸ್ವಲ್ಪ ಎಚ್ಚರಿಕೆಯಿಂದ ಇರೋದು ಒಳಿತು.

ಹೌದು, ರಷ್ಯಾದ ಪ್ರವಾಸಿಗನೊಬ್ಬ ಪೋರ್ಚುಗಲ್‌ನ ಲಿಸ್ಬನ್‌ಗೆ ಭೇಟಿ ನೀಡಿದ್ದ.ಈ ವೇಳೆ ಆತನಿಗೆ ಭಾಷೆಯ ಅಡಚಣೆ ಎದುರಾಯಿತು.ಆದರೂ ಚಿಂತೆ ಮಾಡಿಲ್ಲ.ಏಕೆಂದರೆ ಭಾಷಾಂತರ App ಇದೆಯಲ್ವ?ಎಲ್ಲ ಪದಗಳ ಅರ್ಥವನ್ನು ಅದುವೇ ಹೇಳುತ್ತೆ ಅಲ್ವ? ಈ ಕಾರಣದಿಂದಾಗಿ ಧೈರ್ಯವಾಗಿ ಹೊಟೇಲ್‌ವೊಂದಕ್ಕೆ ನುಗ್ಗಿದ.ಆತನಿಗೆ ದಾಳಿಂಬೆ ಜ್ಯೂಸ್ ಬೇಕಾಗಿತ್ತು.ಕೂಡಲೇ ದಾಳಿಂಬೆ ಜ್ಯೂಸ್‌ಗೆ ಏನು ಹೇಳುತ್ತಾರೆಂದು ಆ್ಯಪ್ ಪರಿಶೀಲಿಸಿದ.ಆ್ಯಪ್ ಎಡವಟ್ಟಿನಿಂದಾಗಿ ಬಾಂಬ್‌ನ ಬೆದರಿಕೆಯೊಡ್ಡಿದ್ದಾನೆಂದು ಆರೋಪಿಸಿ ಪೊಲೀಸರು ಬಂಧಿಸಿರುವ ಘಟನೆ ನಡೆದೇ ಹೋಯಿತು..!

36ವರ್ಷದ ಪ್ರವಾಸಿಗ ಲಿಸ್ಬನ್‌ಗೆ ಭೇಟಿ ನೀಡಿದ್ದ ಸಂದರ್ಭ ರೆಸ್ಟೋರೆಂಟ್‌ವೊಂದಕ್ಕೆ ತೆರಳಿದ್ದ.ಈ ಸಂದರ್ಭದಲ್ಲಿ ಈತ ಪೊಮೆಗ್ರನೇಟ್ (ದಾಳಿಂಬೆ ಜ್ಯೂಸ್)‌ ಬದಲು ಆಕಸ್ಮಿಕವಾಗಿ ಗ್ರೆನೇಡ್‌ ಬೇಕು ಅಂತ ಕೇಳಿದ್ದ..!ಈ ವ್ಯಕ್ತಿ ಗ್ರೆನೇಡ್‌ ಇದೆ ಎಂದು ಬೆದರಿಕೆಯೊಡ್ಡುತ್ತಿದ್ದಾನೆಂದು ರೆಸ್ಟೋರೆಂಟ್‌ ಸಿಬ್ಬಂದಿ ಭಯದಿಂದಲೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ. ರೆಸ್ಟೋರೆಂಟ್‌ ಗೆ ಆಗಮಿಸಿದ್ದ ಪೊಲೀಸರು ಸ್ಫೋಟಕ ಇದೆಯಾ ಎಂದು ಪರೀಕ್ಷಿಸಲು ಆರಂಭಿಸಿದ್ದರು. ಅಂತೂ ಜ್ಯೂಸ್‌ ಕುಡಿಯಲು ಬಂದು ಪೇಚಿಗೆ ಸಿಲುಕುವಂತೆ ಮಾಡಿದ್ದು ಈ ಟ್ರಾನ್ಸಲೇಷನ್‌ App ಅನ್ನೋದು ಸುಳ್ಳಲ್ಲ..!

ಪೊಲೀಸ್‌ ಠಾಣೆಗೆ ಯುವಕನನ್ನು ಕರೆದೊಯ್ದು ವಿಚಾರಣೆ ನಡೆಸಿದಾಗ ನಂತರ ತಿಳಿಯಿತು. ಇದು ಟ್ರಾನ್ಸ್‌ ಲೇಷನ್‌ Appನಿಂದಾದ ಯಡವಟ್ಟು ಎಂದು. ಲಿಸ್ಬನ್‌ ರೆಸ್ಟೋರೆಂಟ್‌ ಗೆ ಆಗಮಿಸಿದ್ದ ರಷ್ಯಾದ ಯುವಕ ಭಾಷೆಯ ಸಮಸ್ಯೆಯಿಂದ ಟ್ರಾನ್ಸ್‌ ಲೇಷನ್‌ Appನಲ್ಲಿ ದಾಳಿಂಬೆ ಜ್ಯೂಸ್‌ ಆರ್ಡರ್‌ ಮಾಡಲು ಪೋರ್ಚುಗೀಸ್‌ ಭಾಷೆಯಲ್ಲಿ ಪೊಮೆಗ್ರನೇಟ್‌ ಶಬ್ದದ ಅರ್ಥ ಹುಡುಕಿದ್ದ..!

ಅದು ಗ್ರೆನೇಡ್‌ ಎಂಬುದಾಗಿ ಭಾಷಾಂತರಿಸಿತ್ತು. ಇದನ್ನೇ ರೆಸ್ಟೋರೆಂಟ್‌ ಸಿಬ್ಬಂದಿ ಏನು ಬೇಕು ಎಂದು ಕೇಳಿದಾಗ ಗ್ರೆನೇಡ್‌ ಅಂತ ಹೇಳಿ ಪೇಚಿಗೆ ಸಿಲುಕುವಂತಾಗಿತ್ತು. ಕೊನೆಗೂ ಯುವಕನ ಬಳಿ ಯಾವುದೇ ಮಾರಕ ಶಸ್ತ್ರಾಸ್ತ್ರಗಳಿಲ್ಲ, ಇದೊಂದು  Appನಿಂದಾದ ಪ್ರಮಾದ ಎಂದು ತಿಳಿದ ಮೇಲೆ ಬಿಡುಗಡೆಗೊಳಿಸಿರುವುದಾಗಿ ವರದಿ ವಿವರಿಸಿದೆ..!

Related posts

ದೇವಸ್ಥಾನದ ಬ್ಯಾನರ್ ನಲ್ಲಿ ದೇವಿಯ ಚಿತ್ರದ ಜೊತೆ ಮಿಯಾ ಖಲೀಫಾ ಫೋಟೋ..! ಧಾರ್ಮಿಕ ಉತ್ಸವದಲ್ಲಿ ಏನಿದು ಎಡವಟ್ಟು..?

Job: ಕಾಂಬೋಡಿಯಾಕ್ಕೆ ಇನ್ನು ಉದ್ಯೋಗಕ್ಕೆ ತೆರಳುವುದು ಸುಲಭವಲ್ಲ..! ಮೋಸದ ಜಾಲಕ್ಕೆ ಸಿಲುಕಿದ್ದ 60 ಮಂದಿ ಭಾರತೀಯರ ರಕ್ಷಣೆ..!

ಪಾಕ್ ನ ಮಾಜಿ ಪ್ರಧಾನಿಗೆ ಮತ್ತು ಆತನ ಪತ್ನಿಗೆ 14 ವರ್ಷ ಜೈಲು..! ತಲಾ ₹787 ಮಿಲಿಯನ್ ದಂಡ..!