ದೇಶ-ಪ್ರಪಂಚ

ಅಜ್ಜನಿಗೆ ಮರು ಜೀವ ನೀಡಿದ ರಸ್ತೆಯಲ್ಲಿನ ಹೊಂಡ ಗುಂಡಿ..!ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದವರು ಆಂಬುಲೆನ್ಸ್‌ ರಸ್ತೆಗುಂಡಿಗೆ ಬಿದ್ದ ಬಳಿಕ ಜೀವ ಪಡೆದುಕೊಂಡಿದ್ದೇಗೆ?

ನ್ಯೂಸ್ ನಾಟೌಟ್‌: ಕೆಲವೊಂದು ಸಲ ರಸ್ತೆಯಲ್ಲಿನ ಹೊಂಡ – ಗುಂಡಿಗಳನ್ನು ಕಂಡಾಗ ಸಿಟ್ಟು ನೆತ್ತಿಗೇರಿ ಬಿಡುತ್ತೆ.. ಜನಪ್ರತಿನಿಧಿಗಳು,ಸಂಬಂಧಿಸಿದ ಅಧಿಕಾರಿಗಳ ಬಗ್ಗೆ ಭರವಸೆಯೇ ಹೊರಟು ಹೋಗುವಂತಾಗುತ್ತೆ..ಇಂತಹ ರಸ್ತೆಗಳಲ್ಲಿ ಸಂಚರಿಸಿದರೆ ಪ್ರಾಣಕ್ಕೇನಾದರೂ ಅಪಾಯವಾಗಬಹುದೇ ಅನ್ನೋದ್ರ ಬಗ್ಗೆಯೂ ಯೋಚನೆ ಕಾಡುತ್ತೆ..ಆದರೆ ಇಲ್ಲೊಂದು ಕಡೆ ರಸ್ತೆಯಲ್ಲಿನ ಹೊಂಡ – ಗುಂಡಿಯೇ ಅಜ್ಜನನ್ನು ಬದುಕಿಸಿದ ಘಟನೆ ಬಗ್ಗೆ ವರದಿಯಾಗಿದೆ.ಉಸಿರು ಚೆಲ್ಲಿದ್ದ ಅಜ್ಜನನ್ನು ಡಾಕ್ಟರ್‌ ಪರೀಕ್ಷಿಸಿ ಅಜ್ಜ ಬಾರದ ಲೋಕಕ್ಕೆ ತೆರಳಿದ್ದಾರೆ ಅನ್ನೋದನ್ನು ಖಚಿತ ಪಡಿಸಿದ್ದಾರೆ.ಆದರೆ ಆ್ಯಂಬುಲೆನ್ಸ್‌ ರಸ್ತೆಯಲ್ಲಿನ ದೊಡ್ಡ ಗುಂಡಿಗೆ ಹಾರಿದ ಬಳಿಕ ಅಜ್ಜ ಉಸಿರಾಡಿದ ಘಟನೆ ಬಗ್ಗೆ ವರದಿಯಾಗಿದೆ.

ಈ ವ್ಯಕ್ತಿಯನ್ನು ದರ್ಶನ್‌ ಸಿಂಗ್‌ ಬ್ರಯಾರ್‌ ಎಂದು ಗುರುತಿಸಲಾಗಿದೆ. ಆಂಬುಲೆನ್ಸ್‌ ಗುಂಡಿಗೆ ಬಿದ್ದ ನಂತರ ಉಸಿರಾಟಲು ಆರಂಭಿಸಿದ ಅಜ್ಜನನ್ನು ಕರ್ನಲ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಪಂಜಾಬ್‌ ನ ಕರ್ನಲ್‌ ನಲ್ಲಿರುವ ಸಿಂಗ್‌ ಮನೆಯಲ್ಲಿ ಕುಟುಂಬ ಸದಸ್ಯರು ಒಟ್ಟುಗೂಡಿ ಅಂತಿಮ ವಿಧಿ ವಿಧಾನ ನಡೆಸಲು ಸಿದ್ಧತೆ ನಡೆಸುತ್ತಿದ್ದರು. ಏತನ್ಮಧ್ಯೆ ಆಂಬುಲೆನ್ಸ್‌ ರಸ್ತೆ ಗುಂಡಿಗೆ ಬಿದ್ದ ನಂತರ ಅಜ್ಜ ಕೈ ಅಲುಗಾಡಿಸುತ್ತಿರುವುದನ್ನು ಗಮನಿಸಿದ ಮೊಮ್ಮಗ ನಾಡಿಮಿಡಿತ ಪರೀಕ್ಷಿಸಿದ್ದ. ಆಗ ನಾಡಿ ಮತ್ತು ಹೃದಯ ಬಡಿತ ಕೇಳಿಸಿಕೊಂಡಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಂತೆ ಆಂಬುಲೆನ್ಸ್‌ ಚಾಲಕನಿಗೆ ಮೊಮ್ಮಗ ಹೇಳಿರುವುದಾಗಿ ವರದಿ ವಿವರಿಸಿದೆ.

ಕೆಲವು ದಿನಗಳ ಹಿಂದೆ 80 ವರ್ಷದ ಸಿಂಗ್‌ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಪಟಿಯಾಲಾದ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂದರ್ಭದಲ್ಲಿ ವೆಂಟಿಲೇಟರ್‌ ನಲ್ಲಿಟ್ಟು ಚಿಕಿತ್ಸೆ ನೀಡಿದ್ದು, ಗುರುವಾರ ಬೆಳಗ್ಗೆ ಸಿಂಗ್‌ ಉಸಿರು ಚೆಲ್ಲಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಮೊಮ್ಮಗ ಬಲ್ವಾನ್‌ ಸಿಂಗ್‌ ಎನ್‌ ಡಿಟಿವಿಗೆ ಪ್ರತಿಕ್ರಿಯೆ ನೀಡಿರುವುದಾಗಿ ವರದಿಯಾಗಿದೆ.ಅಜ್ಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮರುಜನ್ಮ ಪಡೆದಿರುವುದಾಗಿ ಬಲ್ವಾನ್‌ ಸಿಂಗ್‌ ತಿಳಿಸಿದ್ದಾನೆ.

Related posts

ಗರ್ಭಿಣಿ ನಾಯಿಯ ಪ್ರಾಣ ಉಳಿಸಲು ಮತ್ತೊಂದು ನಾಯಿಯಿಂದ ರಕ್ತದಾನ

ಇದೇ ನೋಡಿ ವಿಶ್ವದ ಅತೀ ದೊಡ್ಡ ಹೆಬ್ಬಾವು..!ಹಲವು ನಿಗೂಢತೆಗಳಿರುವ ಅಮೆಝಾನ್ ಅರಣ್ಯದಲ್ಲಿ ಪತ್ತೆ..!ಈ ಹಾವು ಹೇಗಿದೆ ಗೊತ್ತಾ? ವಿಡಿಯೋ ವೀಕ್ಷಿಸಿ..

ಮೊದಲ ಪುತ್ರ IAS ಅಧಿಕಾರಿ, ಮತ್ತೊಬ್ಬ ಉದ್ಯಮಿ! ಇಲ್ಲಿದೆ ಅನಾಥಾಶ್ರಮ ಸೇರಿದ ತಂದೆಯ ಕರುಣಾಜನಕ ಕಥೆ..!