ಕರಾವಳಿಸುಳ್ಯ

ಸುಳ್ಯ: ಕಾಲೇಜ್‌ಗೆ ಹೋಗಲು ಒಪ್ಪದ ಮನಸ್ಸು ,ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ..!

232

ನ್ಯೂಸ್ ನಾಟೌಟ್ : ಅಪ್ರಾಪ್ತ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಂತೋಡು ಗ್ರಾಮದ ಬಿಳಿಯಾರಿನಿಂದ ವರದಿಯಾಗಿದೆ.ಬಾಲಕನನ್ನು  ಬಿಳಿಯಾರಿನ ದಿ. ಮೂಸಾ ಎನ್ನುವವರ ಪುತ್ರ ಹನ್ಸೀಫ್ (17) ಎಂದು ಗುರುತಿಸಲಾಗಿದೆ.

ಬಾಲಕನ ತಾಯಿ ಶಮೀರಾ ಮಗಳ ಚಿಕಿತ್ಸೆಗಾಗಿ ಕ್ಯಾಲಿಕೆಟ್ ತೆರಳಿದ್ದು, ಈ ವೇಳೆ ಬಾಲಕ ಮನೆಯಲ್ಲಿ ಒಬ್ಬನೆ ಇದ್ದ ಎಂದು ತಿಳಿದು ಬಂದಿದೆ.ರಾತ್ರಿ ವೇಳೆ ತನ್ನ ಅಜ್ಜಿಗೆ ಕರೆ ಮಾಡಿ ಮಾತನಾಡಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ ಎಂದು ಹೇಳಲಾಗಿದೆ.ಬಾಲಕನ ಮಾವ ಇಂದು (ಅ.1 ರಂದು) ನಸುಕಿನ ಜಾವ ಬಾಲಕನ ಮನೆಗೆ ಬಂದಾಗ ಹನ್ಸಿಪ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಾಲಕ ತರಗತಿಗೆ ತೆರಳಲು ತನಗೆ ಮನಸ್ಸಿಲ್ಲ ಎಂದು ಮನೆಯಲ್ಲಿ ಹೇಳಿಕೊಂಡಿದ್ದ ಎನ್ನಲಾಗಿದ್ದು,ಇದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.ಬಾಲಕನು ಎಸ್.ಎಸ್.ಎಲ್.ಸಿ. ಪೂರ್ಣಗೊಳಿಸಿ ನಿಂತಿಕಲ್ಲಿನ ಸಂಸ್ಥೆಯಲ್ಲಿ ಐಟಿಐಗೆ  ದಾಖಲಾತಿ ಮಾಡಲಾಗಿತ್ತು. ಇಂದು ತರಗತಿ ಆರಂಭವಾಗಿ ಆತನು ತರಗತಿಗೆ ತೆರಳಬೇಕಾಗಿತ್ತು. ಆದರೆ ದುಖಃಕರ ಸಂಗತಿ ಎಂದರೆ ತರಗತಿ ಆರಂಭವಾಗುವ ಮೊದಲೇ ಈ ಕೃತ್ಯವೆಸಗಿದ್ದು ಮನೆ ಮಗನನ್ನು ಕಳೆದು ಕೊಂಡು ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.

See also  ಮಡಿಕೇರಿ:ಎಂಡಿಎಂಎ ಮಾರಾಟ ಮಾಡಲು ಯತ್ನ; ಆರೋಪಿ ಪೊಲೀಸ್ ಬಲೆಗೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget