ಕರಾವಳಿಕೊಡಗುಸುಳ್ಯ

ಮಡಿಕೇರಿ : ಕಾರು ಮತ್ತು ಗೂಡ್ಸ್ ವಾಹನ ಮುಖಾಮುಖಿ:ವಾಹನಗಳು ಜಖಂ-ಪ್ರಯಾಣಿಕರಿಗೆ ಗಾಯ

ನ್ಯೂಸ್ ನಾಟೌಟ್ : ಕಾರು ಮತ್ತು ಗೂಡ್ಸ್‌ ವಾಹನಗಳ ನಡುವೆ ಅಪಘಾತ ಸಂಭವಿಸಿದ ಘಟನೆ ವಿರಾಜಪೇಟೆ ನಗರದ ಹೊರ ವಲಯದ ಕೊಮ್ಮೆತ್ತೋಡು ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದಿದೆ.ಘಟನೆಯಿಂದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆಂದು ತಿಳಿದು ಬಂದಿದೆ.

ವಿರಾಜಪೇಟೆ-ಸಿದ್ದಾಪುರ ಮುಖ್ಯ ರಸ್ತೆಯ ಕೊಮ್ಮೆತ್ತೋಡು ಬಳಿಯ ಸಂತ ಮರಿಯ ಚರ್ಚ್‌ ಮುಂಭಾಗದ ತಿರುವಿನಲ್ಲಿ ಈ ಅವಘಡ ನಡೆದಿದೆ. ವಿರಾಜಪೇಟೆಯಿಂದ ಸಿದ್ದಾಪುರಕ್ಕೆ ತೆರಳುತ್ತಿದ್ದ ಗೂಡ್ಸ್‌ ವಾಹನ ಮತ್ತು ಸಿದ್ದಾಪುರದಿಂದ ವಿರಾಜಪೇಟೆ ನಗರಕ್ಕೆ ಆಗಮಿಸುತ್ತಿದ್ದ ಟೊಯೋಟಾ ಇನೋವಾ ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ವಾಹನಗಳ ಮುಂಭಾಗ ಜಖಂಗೊಂಡಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ಕಾರಿನಲ್ಲಿದ್ದವರನ್ನು ಅಮ್ಮತ್ತಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಕಾರುಗಳ ನಡುವೆ ಡಿಕ್ಕಿ, ಏಳು ಮಂದಿಗೆ ಗಾಯ

Chandrayaan3:ಚಂದ್ರನಲ್ಲಿ ಅಡಕವಾಗಿದ್ದ ರಹಸ್ಯ ಪತ್ತೆ..!ಇಸ್ರೋ ಪತ್ತೆ ಮಾಡಿರುವ ಆ ರಹಸ್ಯವಾದರೂ ಏನು?

ರಾತ್ರಿ10 ರಿಂದ ಬೆಳಗ್ಗೆ 6 ರವರೆಗೆ ಮೈಕ್ ನಿಷೇಧ