ಕರಾವಳಿ

3 ದಿನಗಳ ಕಾಲ ಕರ್ನಾಟಕದಲ್ಲಿ ಮದ್ಯ ನಿಷೇಧ..! ಇಲ್ಲಿದೆ ಸಂಪೂರ್ಣ ಮಾಹಿತಿ

 ನ್ಯೂಸ್‌ ನಾಟೌಟ್‌:   2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಮೇ 10ರಂದು ನಡೆಯುವ ಮತದಾನಕ್ಕೆ ಮುನ್ನ ರಾಜ್ಯದಲ್ಲಿ ಮದ್ಯ ಮಾರಾಟ ಜೋರಾಗಿದೆ ಎಂದು ವರದಿ ತಿಳಿಸಿದೆ. ಪ್ರಚಾರದಲ್ಲಿ ಭಾಗವಹಿಸುವ ಜನರಿಗೆ ಮದ್ಯದ ಆಮಿಷ ಒಡ್ಡುತ್ತಿರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಇದೀಗ ಕರ್ನಾಟಕದಲ್ಲಿ ಮೂರು ದಿನ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಚುನಾವಣಾ ಆಯೋಗ ನಿರ್ಧರಿಸಿದೆ. 2023 ರ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕಾರಣ ಬಾರ್‌ಗಳನ್ನು ಮುಚ್ಚಲಾಗುತ್ತದೆ. ಈ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಧ್ಯ ಮಾರಾಟ ನಿಷೇಧಿಸಲಾಗುತ್ತದೆ ಎನ್ನಲಾಗಿದೆ.

ಮೇ 8 ರ ಮಧ್ಯರಾತ್ರಿಯಿಂದ ಮೇ 10 ರ ಮಧ್ಯರಾತ್ರಿಯವರೆಗೂ ಮದ್ಯ ಸಿಗುವುದಿಲ್ಲ ಎಂದು ಮಾಹಿತಿ ದೊರೆತಿದೆ. ಮೇ 10 ರಂದು ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಹೀಗಾಗಿ ಮತದಾನಕ್ಕೂ ಒಂದು ದಿನ ಮುನ್ನವೇ ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಲಾಗುತ್ತದೆ.

ಇನ್ನು ಮೇ 13 ರಂದು ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಇರುವುದರಿಂದ ಮೇ 12 ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟಕ್ಕೆ ಕಡಿವಾಣ ಬೀಳಲಿದೆ.

ಚುನಾವಣೆ ಸಂದರ್ಭದಲ್ಲಿ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Related posts

ಕೆನರಾ ಬ್ಯಾಂಕ್ ಸಿಬ್ಬಂದಿ ಕೊರತೆ ಬಗ್ಗೆ ‘ನ್ಯೂಸ್ ನಾಟೌಟ್’ ವಿಶೇಷ ವರದಿ ಬೆನ್ನಲ್ಲೇ ಸಂಪಾಜೆಯಲ್ಲಿ ತುರ್ತು ಸಭೆ, ಮಾ.22ರಂದು ಪ್ರತಿಭಟನೆಗೆ ನಿರ್ಧಾರ

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದ ಮನೆಯಾಗಿದ್ದ ಸೇತುವೆಗೆ ಮುಕ್ತಿ..

ನನ್ನ ಮದುವೆ ಶೀಘ್ರದಲ್ಲೇ ಇದೆ,ರಶ್ಮಿಕಾ ಜತೆ ಇನ್ನೂ ಸಂಪರ್ಕದಲ್ಲಿದ್ದೇನೆ-ನಟ ರಕ್ಷಿತ್ ಶೆಟ್ಟಿ;ಸಿಂಪಲ್ ಸ್ಟಾರ್ ಮದುವೆಯಾಗುತ್ತಿರೋ ಆ ‘ಲಕ್ಕಿ ಗರ್ಲ್’ ಯಾರು ಗೊತ್ತಾ?