Latest

ಕೊಡಗು:ಕೋಳಿಗಳಿಗೆ ಹಕ್ಕಿ ಜ್ವರ ಬೆನ್ನಲ್ಲೇ ಇದೀಗ ಶ್ವಾನಗಳಿಗೂ ಮಾರಕ ಕಾಯಿಲೆ!ಪಾರೋ ವೈರಲ್ ಸೋಂಕಿನಿಂದ ಕಂಗಾಲಾದ ಮಾಲೀಕರು

869

ನ್ಯೂಸ್‌ ನಾಟೌಟ್: ಶ್ವಾನ ಎಂದರೆ ತುಂಬಾ ಮಂದಿಗೆ ಅಚ್ಚು ಮೆಚ್ಚು ಪ್ರಾಣಿ.. ಹೆಚ್ಚಿನವರು ಶ್ವಾನದ ಬಳಿ ಬಂದು ತಮ್ಮ ಚಿಂತೆಯನ್ನು ಕಳಿತಾರೆ.ಮಾಲೀಕನ ನಿಷ್ಠೆಯ ಪ್ರಾಣಿ ಅಂದ್ರೆ ಅದು ಶ್ವಾನ..ಅಂತಹ ಶ್ವಾನಕ್ಕೆ ಈಗ ಎಲ್ಲೆಡೆ ಪಾರೋ ವೈರಲ್ ಸೋಂಕು ತಗುಲುತ್ತಿದ್ದು ಹಲವು ನಾಯಿಗಳು ಈ ಸೋಂಕಿಗೆ ಬಲಿಯಾಗುತ್ತಿವೆ ಅಂದ್ರೆ ಬಾರೀ ಬೇಸರದ ಸಂಗತಿ.. !

ಶ್ವಾನ ಪ್ರಿಯರು, ಅವುಗಳ ಮಾಲೀಕರು ಭಾರಿ ಎಚ್ಚರಿಕೆಯಿಂದ ಇರಬೇಕಾಗಿದೆ. ಹೌದು ಎಲ್ಲೆಡೆ ಹಕ್ಕಿ ಜ್ವರದ ಕಾಟ ಎದುರಾಗಿದ್ದರೆ ಅದರ ನಡುವೆ ಕೊಡಗು ಜಿಲ್ಲೆಯಲ್ಲಿ ನೂರಾರು ಶ್ವಾನಗಳಿಗೆ ಪಾರೋ ವೈರಲ್ ಸೋಂಕು ವಿಪರೀತವಾಗಿ ಹರಡುತ್ತಿದೆ. ಈ ಸೋಂಕಿಗೆ ಒಳಗಾದ ಶ್ವಾನಗಳು ಆಹಾರಬಿಟ್ಟು ರಕ್ತಬೇಧಿ ಮತ್ತು ರಕ್ತವಾಂತಿಯಿಂದ ನರಳಿ ಬಳಿಕ ನಿತ್ರಾಣಗೊಂಡು ಸಾವನ್ನಪ್ಪುತ್ತಿವೆ. 

ಈಗಾಗ್ಲೇ ಈ ಸೋಂಕಿಗೆ ತುತ್ತಾಗಿ 50 ಕ್ಕೂ ಹೆಚ್ಚು ಸಾಕುಶ್ವಾನಗಳು ಸಾವನ್ನಪ್ಪಿದ್ದು, ಭಾರಿ ಆತಂಕ ಪಡುವಂತೆ ಮಾಡಿದೆ. ಕೆಲವರಂತು ನಾಯಿ ಸಾಕೋದಕ್ಕಾಗಿ ಸಾವಿರಾರು ರೂ ಖರ್ಚು ಮಾಡುತ್ತಾರೆ. ಅಂಥದ್ರಲ್ಲಿ ಈ ರೀತಿಯ ಕಾಯಿಲೆ ಬಂದ್ರೆ ಅವರ ಸಂಕಟ ಹೇಳತೀರದು. ಇದರೊಂದಿಗೆ ಬೀದಿ ನಾಯಿಗಳು ಕೂಡ ಸೋಂಕಿನಿಂದ ಬಳಸಿ ಸಾವನ್ನಪ್ಪುತ್ತಿದ್ದು, ಅದರ ಲೆಕ್ಕ ದೊರೆತ್ತಿಲ್ಲ. ಜಿಲ್ಲೆಯ ಎಲ್ಲಾ ಪಶು ಆಸ್ಪತ್ರೆಗಳಿಗೆ ನಿತ್ಯ 20 ರಿಂದ 25 ನಾಯಿಗಳು ಈ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ಬರುತ್ತಿವೆ ಅನ್ನೋದು ವಿಪರ್ಯಾಸ ಸಂಗತಿ.

ಲಕ್ಷಣಗಳೇನು?

ಸೋಂಕು ಬಂದ ಎರಡನೇ ದಿನದಿಂದಲೇ ಶ್ವಾನ ಆಹಾರ ತ್ಯಜಿಸುತ್ತದೆ. ಬಳಿಕ ನಾಲ್ಕನೇ ದಿನದಿಂದ ರಕ್ತಮಿಶ್ರಿತ ಬೇಧಿ ಮತ್ತು ವಾಂತಿ ಮಾಡಿಕೊಳ್ಳಲಾರಂಭಿಸುತ್ತದೆ. ಒಮ್ಮೆ ರಕ್ತಬೇಧಿ ಮತ್ತು ವಾಂತಿ ಮಾಡಿಕೊಳ್ಳಲು ಆರಂಭಿಸಿದವೆಂದರೆ ಅವುಗಳನ್ನು ಬದುಕಿಸುವುದು ಕಷ್ಟ. ಆದರೆ ನಿರಂತರ ಐದರಿಂದ ಆರು ದಿನಗಳ ಕಾಲ ಚಿಕಿತ್ಸೆ ನೀಡಿದರೆ ಬದುಕುವ ಸಾಧ್ಯತೆ ಶೇ 80 ರಷ್ಟು ಇರುತ್ತದೆ ಎನ್ನುತ್ತಾರೆ ವೈದ್ಯರು. ಆದರೆ ಒಂದೋ ಎರಡು ದಿನಗಳು ಮಾತ್ರವೇ ಚಿಕಿತ್ಸೆ ಕೊಡಿಸಿ ಸುಮ್ಮನಾದರೆ ಸಂಪೂರ್ಣ ಗುಣಮುಖವಾಗುವುದಿಲ್ಲ. ತಾತ್ಕಾಲಿಕವಾಗಿ ಸ್ವಲ್ಪ ಚೇತರಿಸಿಕೊಂಡಂತೆ ಕಂಡು ಮತ್ತೆ ರೋಗ ಉಲ್ಭಣಗೊಂಡು ಸಾವನ್ನಪ್ಪುವ ಸಾಧ್ಯತೆ ಹೆಚ್ಚು.

ಇಂತಹ ಕಾಯಿಲೆ ಕೊಡಗು ಜಿಲ್ಲೆಯಲ್ಲಿ ತೀವ್ರವಾಗಿ ಹರಡುತ್ತಿದ್ದು ಶ್ವಾನ ಪ್ರಿಯರು ಕಂಗಾಲಾಗುವಂತೆ ಮಾಡಿದೆ. ಮುದ್ದಿನಿಂದ ಸಾಕಿದ ನಾಯಿಗಳು ಇದ್ದಕ್ಕಿದ್ದಂತೆ ರೋಗಕ್ಕೆ ತುತ್ತಾಗಿ ನರಳಿ ಸಾಯುವುದನ್ನು ನೋಡುವುದಕ್ಕೂ ಮೊದಲೇ ಅವುಗಳ ಮಾಲೀಕರು ಲಸಿಕೆ ಹಾಕಿಸಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹವಾಮಾನದಲ್ಲಿ ಅತಿಯಾದ ಬಿಸಿಲಿನ ತಾಪಮಾನದಿಂದಾಗಿಯೂ ಈ ರೋಗ ಹರುಡುವುದಕ್ಕೆ ಕಾರಣವಾಗಿದೆ. ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. 

See also  ಕೊಡಗು: ಬಿಟ್ಟಂಗಾಲ ಬಳಿ ಭೀಕರ ರಸ್ತೆ ಅಪಘಾತ! ನಾಲ್ಕು ವಾಹನಗಳು ನಜ್ಜುಗುಜ್ಜು!ವಿಡಿಯೋ ವೀಕ್ಷಿಸಿ..
  Ad Widget   Ad Widget   Ad Widget   Ad Widget   Ad Widget   Ad Widget