ಕರಾವಳಿಕೊಡಗು

ಮಡಿಕೇರಿ: ಜಗತ್ತಿನಲ್ಲೇ ಅಪರೂಪ ಎನಿಸಿಕೊಂಡಿರುವ ಭಾರೀ ಗಾತ್ರದ ಉಡ ಪ್ರತ್ಯಕ್ಷ..!,ಉಡವನ್ನು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ ಜನ..!

255

ನ್ಯೂಸ್ ನಾಟೌಟ್ : ಭಾರೀ ಗಾತ್ರದ ಅಪರೂಪದ ಹಾಗೂ ರಕ್ಷಿತಾರಣ್ಯ ಪ್ರದೇಶದಲ್ಲಿ ಕಂಡುಬರುವ ಉಡ ಕೊಡಗಿನಲ್ಲಿ ಪ್ರತ್ಯಕ್ಷವಾಗಿರುವ ಘಟನೆ ವರದಿಯಾಗಿದೆ.ಇತ್ತೀಚೆಗೆ 6 ಅಡಿ ಉದ್ದದ ಉಡ ಕಾಣಿಸಿಕೊಂಡಿದ್ದು ಭಾರಿ ಅಚ್ಚರಿಗೆ ಕಾರಣವಾಗಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಕೊಡಂದೇರ ದಿಲೀಪ್ ಎಂಬವರ ಮನೆಯ ಸಮೀಪ ಪ್ರತ್ಯಕ್ಷವಾಗಿದೆ ಎಂದು ತಿಳಿದು ಬಂದಿದೆ.ಕೂಡಲೇ ಆ ಉಡವನ್ನು ರಕ್ಷಿಸಿ ಸಮೀಪದ ರಕ್ಷಿತಾರಣ್ಯಕ್ಕೆ ಬಿಡಲಾಯಿತು. ಆದರೆ ಈ ಉಡವನ್ನು ವೀಕ್ಷಿಸಿದ ಜನ ಅಚ್ಚರಿಗೊಳಗಾಗಿದ್ದು ಸುಳ್ಳಲ್ಲ..!

ಜಿಲ್ಲೆಯಲ್ಲಿ ಉಡ ಇದೆ ಆದರೂ ಇಷ್ಟೊಂದು ದೊಡ್ಡ ಗಾತ್ರದ ಉಡ ಇದುವರೆಗೆ ಪ್ರತ್ಯಕ್ಷಗೊಂಡಿರಲಿಲ್ಲ ಎಂದು ಜನರಾಡಿಕೊಂಡರು.ಇದೀಗ ಕಾಣಿಸಿಕೊಂಡಿರುವ ಉಡ ಜಗತ್ತಿನಲ್ಲೇ ಅಪರೂಪ ಎನಿಸುವ ಕೊವೊಡೊ ಡ್ರ್ಯಾಗನ್ ಎಂದು ತಿಳಿದುಬಂದಿದೆ. ಇದರ ಫೋಟೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ತನ್ನ ಜೀವನವನ್ನೇ ಕತ್ತಲನ್ನಾಗಿಸಿದ ಸುಳ್ಯದ ಮಹಿಳೆ,ಉದ್ಯಮಿಯೊಬ್ಬರ ಪತ್ನಿಯ ಈ ನಿರ್ಧಾರಕ್ಕೆ ಕಾರಣವೇನು?

https://www.youtube.com/watch?v=mtKTEHG9O4I
See also  ರಕ್ತಚಂದನ ಹರಾಜು ಮಾಡಿದ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು! ಬರೋಬ್ಬರಿ 28 ಕೋಟಿ ಮೌಲ್ಯದ ರಕ್ತಚಂದನ ದೊರೆತದ್ದು ಎಲ್ಲಿಂದ? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget