Latestರಾಜ್ಯವೈರಲ್ ನ್ಯೂಸ್

ಕರ್ನಾಟಕ ಬಂದ್ ಇದ್ದರೂ ಸಿನಿಮಾ ಚಿತ್ರೀಕರಣ ನಿಲ್ಲಿಸಲ್ಲ ಎಂದ ವಾಣಿಜ್ಯ ಮಂಡಳಿ..! ಸಿನಿಮಾ ಪ್ರದರ್ಶನಗಳು ಕೂಡ ಎಂದಿನಂತೆ..!

691

ನ್ಯೂಸ್ ನಾಟೌಟ್: ಕರ್ನಾಟಕ ರಾಜ್ಯ ಬಂದ್ ಮಾರ್ಚ್ 22 ರಂದು ನಡೆಯಲಿದೆ. ಬಂದ್ ​ಗೆ ಈಗಾಗಲೇ ಹಲವಾರು ಸಂಘಟನೆಗಳು ಪ್ರತ್ಯಕ್ಷ, ಪರೋಕ್ಷ ಬೆಂಬಲ ನೀಡಿವೆ. ಚಿತ್ರರಂಗದವರು ಬಂದ್ ಕುರಿತಾಗಿ ಇಂದು (ಮಾರ್ಚ್ 20) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿದ್ದು, ಬಂದ್​ಗೆ ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಬಂದ್ ​ಗೆ ಬೆಂಬಲ ಇರಲಿದೆಯಾದರೂ ಸಿನಿಮಾ ಚಿತ್ರೀಕರಣಗಳನ್ನು ನಿಲ್ಲಿಸಲಾಗುತ್ತಿಲ್ಲ. ಚಿತ್ರ ಪ್ರದರ್ಶಕರು ಸಹ ಬಂದ್ ​ಗೆ ಬೆಂಬಲ ನೀಡಿದ್ದು, ಮಾರ್ಚ್ 22 ರಂದು ಬೆಳಿಗಿನ ಆಟವನ್ನು ಪ್ರದರ್ಶಿಸುತ್ತಿಲ್ಲ ಬದಲಿಗೆ ಮಧ್ಯಾಹ್ನದ ಬಳಿಕ ಸಿನಿಮಾ ಪ್ರದರ್ಶನಗಳು ಎಂದಿನಂತೆ ನಡೆಯಲಿವೆ.

ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ನಿರ್ಮಾಪಕರ ಸಂಘ, ಪ್ರದರ್ಶಕರ ಸಂಘ, ವಿತರಕರ ಸಂಘ, ಕಾರ್ಮಿಕರ ಒಕ್ಕೂಟ, ನಿರ್ದೇಶಕರ ಸಂಘ, ಸಂಕಲನ ಕರಾರ ಸಂಘ, ಛಾಯಾಗ್ರಾಹಕರ ಸಂಘ ಭಾಗಿ ಆಗಿದ್ದವು.

ಸಭೆಯ ಬಳಿಕ ಮಾತನಾಡಿದ ಅಧ್ಯಕ್ಷ ನರಸಿಂಹಲು, ‘ರಾಜಣ್ಣ ಅವರ ಕಾಲದಿಂದ ನೆಲ ಜಲ ಭಾಷೆಗೆ ಚಿತ್ರರಂಗದವರು ಬೆಂಬಲ ಕೊಡುತ್ತಾ ಬಂದಿದ್ದೇವೆ. ಈಗ ರಾಜ್ಯದ ಹಿತದೃಷ್ಟಿಯಿಂದ ಮಾಡುತ್ತಿರುವ ಬಂದ್ ​ಗೆ ಬೆಂಬಲ ಇದೆ. ಆದರೆ ಚಿತ್ರೀಕರಣ ನಿಲ್ಲಿಸಲು ಸಾಧ್ಯವಿಲ್ಲ. ಈಗಾಗಲೇ ಮುಂಚಿತವಾಗಿ ಯೋಜನೆ ಹಾಕಿಕೊಂಡು ಚಿತ್ರೀಕರಣ ಮಾಡುತ್ತಿರುತ್ತಾರೆ ಹಾಗಾಗಿ ಚಿತ್ರೀಕರಣ ನಿಲ್ಲಿಸುವುದಿಲ್ಲ’ ಎಂದಿದ್ದಾರೆ.

‘ಸಿನಿಮಾ ಶೂಟಿಂಗ್ ​ಗೆ ಯಾವುದೇ ಕಡಿವಾಣ ಇರುವುದಿಲ್ಲ. ಆದರೆ ಯಾವುದೇ ಸಿನಿಮಾ ತಂಡಗಳು ಅಥವಾ ನಿರ್ಮಾಪಕರು ಸ್ವಯಂ ಪ್ರೇರಿತವಾಗಿ ಚಿತ್ರೀಕರಣ ಬಂದ್ ಮಾಡಿದರೆ ಅದಕ್ಕೆ ಸ್ವಾಗತ ಇದೆ. ಕಲಾವಿದರ ಸಂಘದವರು ಸಭೆಯಲ್ಲಿ ಭಾಗಿ ಆಗಲು ಆಗಿಲ್ಲ. ಆದರೆ ನಮ್ಮ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ನಿರ್ಮಾಪಕರ ಸಂಘ ಸಹ ನೈತಿಕ ಬೆಂಬಲವನ್ನು ನೀಡಿದೆ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಬೆಟ್ಟಿಂಗ್‌ ಆ್ಯಪ್ ಪ್ರಚಾರ ಮಾಡಿದ ವಿಜಯ್ ದೇವರಕೊಂಡ, ಪ್ರಕಾಶ್‌ ರಾಜ್‌, ರಾಣಾ ಸೇರಿದಂತೆ ಖ್ಯಾತ 25 ನಟರ ಮೇಲೆ ಕೇಸ್‌..! ಇಲ್ಲಿದೆ ಸಂಪೂರ್ಣ ಮಾಹಿತಿ

See also  ಉಡುಪಿ: ಬೈಕ್ ಗೆ ಗುದ್ದಿ ಎಳೆದೊಯ್ದ ರಭಸಕ್ಕೆ ಈಚರ್ ಲಾರಿ ಬೆಂಕಿಗಾಹುತಿ..! ಬೈಕ್ ಸವಾರ ಸಾವು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget