ಕರಾವಳಿ

ಸಿದ್ದು ಉಚಿತ ಬಸ್ ಪ್ರಯಾಣ ಭಾಗ್ಯ ಯಾವೆಲ್ಲ ಮಹಿಳೆಯರಿಗೆ ಸಿಗುತ್ತೆ..? ಇಲ್ಲಿದೆ ನೋಡಿ ಡಿಟೇಲ್ಸ್‌..

ನ್ಯೂಸ್ ನಾಟೌಟ್: ಸಿದ್ದರಾಮಯ್ಯ ಸರ್ಕಾರ ಈಗ ಭರವಸೆಯ ಗ್ಯಾರಂಟಿಗಳನ್ನು ಜಾರಿಗೆ ತರುವುದರತ್ತ ಚಿತ್ತವಹಿಸಿದೆ. ಇದಕ್ಕಾಗಿ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಕ್ಕೆ ಎಲ್ಲ ವ್ಯವಸ್ಥೆಯನ್ನು ಮಾಡಿದೆ. ಸಿದ್ದು ಸರಕಾರ ಹೊರಡಿಸಿದ್ದ ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭಾಗ್ಯವೂ ಒಂದಾಗಿತ್ತು. ಈ ಉಚಿತ ಭಾಗ್ಯವನ್ನು ಸರಕಾರದ ವತಿಯಿಂದ ನೀಡಲಾಗುತ್ತದೆ ಎಂದು ಕಾಂಗ್ರೆಸ್‌ ಮೂಲಗಳಿಂದ ತಿಳಿಸಲಾಗಿದೆ.

ಶಕ್ತಿ ಯೋಜನೆಯಡಿ ಸರಕಾರಿ ಸಾರಿಗೆ ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಗ ಸಿಗಲಿದೆ. ಐಷಾರಾಮಿ ಬಸ್‌ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಹೊರ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದಿಲ್ಲ. ರಾಜ್ಯದ ಮಹಿಳೆಯರಿಗೆ ಬಸ್ ಪ್ರಯಾಣಕ್ಕಾಗಿಯೇ ಪ್ರತ್ಯೇಕ ಪಾಸು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

Related posts

ಟೀಕೆಗಳ ಬೆನ್ನಲ್ಲೇ ಓಡೋಡಿ ಬರ್ತಿದ್ದಾರೆ ಡಿವಿ ಸದಾನಂದ ಗೌಡ ..!

ಮಡಿಕೇರಿ:ಮಾದಕ ವ್ಯಸನಿಗಳಿಗೆ ನೋ ಎಂಟ್ರಿ,ಡ್ರಗ್ಸ್ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆಯನ್ನಿರಿಸಿದ ಕೊಡಗಿನ ಜಮಾತ್..!

ಬೆಳ್ತಂಗಡಿ: ಕುತ್ಲೂರು ಕಾಡಬಾಗಿಲು ಸಂಪರ್ಕ ಸೇತುವೆ ಕುಸಿತ, ಸಂಕಷ್ಟಕ್ಕೆ ಸಿಲುಕಿದ 30ಕ್ಕೂ ಅಧಿಕ ಅರಣ್ಯವಾಸಿ ಮಲೆಕುಡಿಯ ಕುಟುಂಬ