ಬೆಂಗಳೂರು

ಪತ್ನಿ ಮನೆಯಿಂದ ಹಣ,ಒಡವೆ ಕೊಟ್ಟರೂ ಸಂತೋಷನಿಗೆ ಸಂತೋಷವಿಲ್ಲ..!,ಪ್ರೀತಿಸಿ ಮದುವೆಯಾದಳ ಉಸಿರು ಚೆಲ್ಲಿಸಿ ನಾಟಕವಾಡಿದ..!,6 ತಿಂಗಳ ಕಂದಮ್ಮ ಈಗ ಅನಾಥ..ಏನಿದು ಘಟನೆ?

ನ್ಯೂಸ್ ನಾಟೌಟ್: ಅವರಿಬ್ಬರು ಪರಸ್ಪರ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು.ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿ ಅನ್ಯೋನ್ಯವಾಗಿದ್ದರು.ಇವರಿಬ್ಬರದು ಬೆಸ್ಟ್ ಜೋಡಿ,ಇವರಿಬ್ಬರ ಪ್ರೀತಿಯ ಸಂಕೇತಕ್ಕೆ ಒಂದು ಮುದ್ದಾದ ಹೆಣ್ಣು ಮಗು ಮಡಿಲು ಸೇರಿತ್ತು.ಆದರೆ ಯಾರ ಕೆಟ್ಟ ದೃಷ್ಟಿ ಇವರ ಮೇಲೆ ಬಿತ್ತೋ ಏನೋ…

ಮೂಲತಃ ತಮಿಳುನಾಡಿನ ಆ ಜೋಡಿ ಬೆಂಗಳೂರಲ್ಲಿ ವಾಸವಾಗಿತ್ತು.ಆದರೆ ಪ್ರೀತಿಸಿದವಳನ್ನೇ ಬಾರದ ಲೋಕಕ್ಕೆ ಕಳುಹಿಸಿ ಆಕೆಯೇ ಬದುಕನ್ನು ಕತ್ತಲು ಮಾಡಿಕೊಂಡಿದ್ದಾಳೆಂದು ಎಂದು ಬಿಂಬಿಸಲು ಹೋಗಿ ಪತಿ ಈಗ ಜೈಲಿನಲ್ಲಿ ಕಂಬಿ ಎನಿಸುತ್ತಿದ್ದಾನೆ. ಬೆಂಗಳೂರಿನ ಯಲಹಂಕ ಉಪನಗರ 3ನೇ ಹಂತದಲ್ಲಿ ಸಂತೋಷ್‌ ಎಂಬಾತ ತನ್ನ ಪತ್ನಿ ರೇಖಾಳನ್ನು ಶಾಶ್ವತವಾಗಿ ಕಣ್ಮುಚ್ಚುವಂತೆ ಮಾಡಿದ್ದಾನೆ.

ಬಳಿಕ ಸೀರೆಯಿಂದ ಫ್ಯಾನಿಗೆ ಆಕೆಯನ್ನು ತೂಗಿಸಿ ಆಕೆಯೇ ಕೃತ್ಯವೆಸಗಿತ್ತು ಎಂಬಂತೆ ಬಿಂಬಿಸಿ ಕುಟುಂಬಸ್ಥರಿಗೆ ಅನುಮಾನ ಬರದಂತೆ ಸಂತೋಷ್‌ ನಾಟಕವಾಡಲು ಆರಂಭಿಸಿದ್ದ.ಆದರೆ ಈತನ ಈ ಕೃತ್ಯಕ್ಕೆ ಆರು ತಿಂಗಳ ಕೂಸು ಈಗ ಅನಾಥವಾಗಿದೆ. ರೇಖಾ ಹಾಗೂ ಸಂತೋಷ್‌ ಶಾಲೆಯಲ್ಲಿ ಇರುವಾಗಲೇ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸಿ, ನಂತರ ಮನೆಯವರನ್ನೆಲ್ಲ ಒಪ್ಪಿಸಿ ಮದುವೆಯಾಗಿದ್ದರು.ಆದರೆ ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ರೇಖಾ ಹಾಗೂ ಸಂತೋಷ್‌ ಮಧ್ಯೆ ಹಣದ ವಿಚಾರಕ್ಕೆ ಜಗಳವಾಗುತ್ತಿತ್ತು ಎನ್ನಲಾಗಿದೆ.

ಮದುವೆ ಆದಾಗಿನಿಂದಲೂ ಹಣಕ್ಕಾಗಿ ಸಂತೋಷ್‌ ತನ್ನ ಪತ್ನಿಯನ್ನು ಪೀಡಿಸುತ್ತಾ ಇದ್ದ ಎನ್ನಲಾಗಿದೆ. ರೇಖಾ ಮನೆಯವರು ಈತನಿಗೆ ಹಣ, ಒಡವೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದರು. ಆದರೂ ಸಂತೋಷ್‌ ಸಂತೋಷವಾಗಿರದೇ ರೇಖಾಳ ಬಳಿ ಸೈಟ್ ಖರೀದಿ ಮಾಡಬೇಕು, ತವರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದ ಎನ್ನಲಾಗಿದೆ. ಇದಕ್ಕೆ ರೇಖಾ ಒಪ್ಪದಿದ್ದಾಗ ಹಲವು ಬಾರಿ ಗಲಾಟೆ ಮಾಡಿ ರೇಖಾಳ ಸಂತೋಷವನ್ನು ಹಾಳು ಮಾಡುತ್ತಿದ್ದ. ಹೊಡೆಯುತ್ತಿದ್ದ,ಬಡಿಯುತ್ತಿದ್ದ. ಇದೇ ವಿಚಾರವಾಗಿ ಮತ್ತೆ ಗಲಾಟೆ ನಡೆದಿದ್ದು,ಇದೀಗ ಈ ದುರಂತ ಸಂಭವಿಸಿದೆ.

ಸಂತೋಷ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ. ಆರೋಪಿ ಸಂತೋಷ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

Related posts

`ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ’ ಎಂದಿದ್ದ ಉದಯನಿಧಿಗೆ ಇಂದು(ಜೂ.25) ಬೆಂಗಳೂರು ಕೋರ್ಟ್‌ ನಲ್ಲಿ ವಿಚಾರಣೆ..! ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಉದಯನಿದಿಗೆ ಸೂಚನೆ ನೀಡಿದ್ದ ಕೋರ್ಟ್‌..!

ಸರ್ಕಾರವನ್ನು ಎದುರಿಸಲು ಸಮರ್ಥ ವಿರೋಧ ಪಕ್ಷದ ನಾಯಕ ಸಿಗದಿರುವುದು ದುರಂತ!-ಬಿಜೆಪಿಗೆ ಕಾಂಗ್ರೆಸ್ ಸವಾಲು

Shakthi Yojane:ಮಹಿಳೆಯರೇ ,ಸ್ಮಾರ್ಟ್ ಕಾರ್ಡ್ ಇಲ್ಲಾಂದ್ರೆ ಫ್ರೀಯಾಗಿ ಓಡಾಡಕ್ಕಾಗಲ್ಲ;ಇದನ್ನು ಪಡೆಯುವುದು ಹೇಗೆ?ಎಲ್ಲಿ ಸಿಗಲಿದೆ?